ಕಾಲೇಜು ಕ್ಯಾಂಪಸ್​ ಗಳಲ್ಲಿ ಭಯದ ವಾತಾವರಣ

udp-23-abvp
Published on

ಉಡುಪಿ: ಇತ್ತಿಚಿನ ದಿನದಲ್ಲಿ ಕಾಲೇಜು ಕ್ಯಾಂಪಸ್​ ಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ನೇಹಾ ಹೀರೆಮಠ ಕೊಲೆ ಪ್ರಕರಣ, ಕಡಬದಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಆಸಿಡ್​ ದಾಳಿ, ಉಡುಪಿಯಲ್ಲಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಪ್ರಕರಣ ಇದಕ್ಕೆ ಉದಾಹರಣೆಯಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಭದ್ರತೆಯ ಕೊರತೆ ಎದ್ದು ಕಾಣಿಸುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿನಿ ಮಾಣಿಕ್ಯ ಭಟ್​ ಹೇಳಿದರು.

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹೀರೆಮಠ ಕೊಲೆ ಪ್ರಕರಣ ಖಂಡಿಸಿ ಎಬಿವಿಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ರಾಜ್ಯ ಸಹ-ಕಾರ್ಯದರ್ಶಿ ಹರ್ಶಿತ್​ ಕೊಯ್ಲ ಮಾತನಾಡಿದರು. ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀರಾಮ್​ ಅಂಗೀರಸ, ಜಿಲ್ಲಾ ಸಂಚಾಲಕ ಗಣೇಶ್​ ಪೂಜಾರಿ, ತಾಲೂಕು ಸಂಚಾಲಕರುಗಳಾದ ಅಜಿತ್​ ಜೋಗಿ ಮತ್ತು ಶ್ರೇಯಸ್​ ಅಂಚನ್​, ನಗರ ಕಾರ್ಯದರ್ಶಿ ಶ್ರೀವತ್ಸ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಂಹಿತಾ ಮತ್ತು ಪ್ರಮುಖರಾದ ಕಾರ್ತಿಕ್​, ನವೀನ್​, ಸ್ವಸ್ತಿಕ್​, ವರುಣ್​, ಮನು, ಮಂಗಳಗೌರಿ, ಸುಚಿತಾ ಉಪಸ್ಥಿತರಿದ್ದರು.

ಪ್ರತಿಭಟನಾ ಜಾಥಾ ಜೋಡುಕಟ್ಟೆಯಿಂದ ಪ್ರಾರಂಭಿಸಿ ಕವಿ ಮುದ್ದಣ್ಣ ಮಾರ್ಗವಾಗಿ ಸಾಗಿ ಕ್ಲಾಕ್​ ಟವರ್​ ನಲ್ಲಿ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net