

ಹುಬ್ಬಳ್ಳಿ: ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ, ಇಲ್ಲಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ವಿಶ್ವವಿದ್ಯಾಲಯ ಕಾನೂನು ಶಾಲೆ ಎದುರು ಜಮಾಯಿಸಿದ ಎಬಿವಿಪಿ ಕಾರ್ಯಕರ್ತರು, ಇಲ್ಲಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡ ಹೇರುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಪರೀಕ್ಷೆ ಹಾಗೂ ಮೌಲ್ಯಮಾಪನದ ಹೆಸರಿನಲ್ಲಿ ಬೆದರಿಸಲಾಗುತ್ತಿದೆ ಎಂದು ದೂರಿದರು.
ವಿವಿಯಲ್ಲಿ ಸಮರ್ಪಕ ಹಾಸ್ಟೇಲ್ ವ್ಯವಸ್ಥೆ ಇಲ್ಲ, ಹೆಣ್ಣು ಮಕ್ಕಳ ಹಾಸ್ಟೇಲ್ ಬಳಿ ಭದ್ರತೆ ಕಡಿಮೆಯಾಗಿದೆ. ಒಟ್ಟಾರೆ ವಿವಿಯಲ್ಲಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕಾನೂನು ಶಾಲೆಯ ನಿರ್ದೇಶಕಿ ಡಾ. ರತ್ನಾ ಭರಮಗೌಡರ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಮಣಿಕಂಠ ಕಳಸ, ಅರುಣ್ ಅಮರಗೋಳ, ಉಲ್ಲಾಸ್ ಗೋಡಿ, ವಿಜಯ ಕಲ್ಲೂರ, ಮಣಿಕಂಠ ದೇಸಾಯಿ, ಬಸವನಗೌಡ ಪಾಟೀಲ್, ಸಿದ್ದಾರ್ಥ ಕೋರಿ, ಮನೋಜ್, ನಾಗದತ್ತ, ಸಂಜನ, ಮುತ್ತು, ಬಸವ ರೆಡ್ಡಿ, ವಿಕ್ರಮ್, ಅನ್ಮೋಲ್, ಓಂ ಗೋರ್ಪಡೆ, ವಿನಯ್, ಸಿದ್ದು, ಬಾಪು ಪಾಟೀಲ್ ಉಪಸ್ಥಿತರಿದ್ದರು.