

ವಿಜಯವಾಣಿ ಸುದ್ದಿಜಾಲ ಗದಗ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ವಿಶ್ವವಿದ್ಯಾಲಯದ ಕುಲಾ-ಧಿಪತಿ ಅಧಿ-ಕಾರವನ್ನು ರಾಜ್ಯಪಾಲರಿಂದ ಮುಖ್ಯಮಂತ್ರಿಗಳಿಗೆ ನೀಡುವ ಸಚಿವ ಸಂಪುಟದ ನಿರ್ಧಾರವನ್ನು ವಿರೋಧಿಸಿ ಜಿಲ್ಲಾ ಎಬಿವಿಪಿ ಟಕದಿಂದ ಶನಿವಾರ ರಾಜ್ಯ ಗ್ರಾಮೀಣಾಭಿವೃದ್ದಿ ವಿಶ್ವವಿದ್ಯಾಲಯ ಮುಂಭಾಗದಲ್ಲಿ ಪ್ರತಿಭಟಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಸಂಟನೆಯ ಜಿಲ್ಲಾ ಪ್ರಧಾನಕಾರ್ಯದಶಿರ್ ಅರುಣ ಕುಮಾರ, ವಿಶ್ವವಿದ್ಯಾಲಯಗಳು ಶಿಣದ ಭಾಗವಾಗಬೇಕು ಹೊರತು ರಾಜಕಾರಣದ ಕೇಂದ್ರ ಆಗಬಾರದು ಎಂಬ ಉದ್ದೇಶದಿಂದ ಸಂವಿಧಾನಿಕ ಹುದ್ದೆಯಾದ ರಾಜ್ಯಪಾಲರ ಬಳಿ ವಿಶ್ವವಿದ್ಯಾಲಯಗಳ ಕುಲಾಧಿಪತಿ ಹುದ್ದೆ ಇರುತ್ತದೆ. ಆದರೆ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಕುಲಾಧಿಪತಿ ಹುದ್ದೆಯನ್ನು ಸಿಎಂ ಅವರಿಗೆ ನೀಡುವ ಕುರಿತು ನಿರ್ಣಯ ಕೈಗೊಂಡಿದೆ. ಈ ನಡೆಯನ್ನು ಸರ್ಕಾರ ಕೈಬಿಟ್ಟು ನಿರ್ನಯವನ್ನು ವಾಪಾಸ್ಸು ಪಡೆಯಬೇಕೆಂದು ಅಖಿಲ ಭಾರತೀಯ ವಿದ್ಯಾಥಿರ್ ಪರಿಷತ್ ಸರ್ಕಾರಕ್ಕೆ ಆಗ್ರಹಿಸುತ್ತದೆ.
ರಾಜ್ಯ ಸರ್ಕಾರಕ್ಕೆ ವಿಶ್ವವಿದ್ಯಾಲಯಗಳ ಬಗ್ಗೆ ಕಾಳಜಿ ಇದ್ದರೆ ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡಿ ಅವುಗಳ ಅಭಿವೃದ್ಧಿ ಮಾಡಬೇಕು. ಆದರೆ, ಇವತ್ತು ವಿದ್ಯಾಥಿರ್ಗಳು ಕಟ್ಟಿದ ಶುಲ್ಕದಿಂದ ವಿಶ್ವವಿದ್ಯಾಲಯಗಳನ್ನು ನಡೆಸುವ ಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಿದೆ. ಸರ್ಕಾರದ ವ್ಯವಸ್ಥೆಯಲ್ಲಿರುವ ವ್ಯಕ್ತಿಗಳು ತಪ್ಪು ಮಾಡಿದಾಗ ಅದನ್ನು ಗಮನಿಸಿ ವ್ಯವಸ್ಥಿತವಾಗಿ ಸರ್ಕಾರವನ್ನು ನಡೆಸುವ ಜವಾಬ್ದಾರಿ ರಾಜ್ಯಪಾಲರ ಮೇಲೆ ಇರುತ್ತದೆ. ತಪ್ಪನ್ನು ಪ್ರಶ್ನಿಸಿದ ರಾಜ್ಯಪಾಲರ ವಿರುದ್ಧ ಮುಖ್ಯಮಂತ್ರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ವಿಶ್ವವಿದ್ಯಾಲಯ ಮತ್ತು ಶಿಣ ೇತ್ರದಲ್ಲಿ ಈ ರೀತಿಯ ಚಟುವಟಿಕೆಗಳು ಸೂಕ್ತವಲ್ಲ. ಸಂವಿಧಾನಿಕ ಹುದ್ದೆಗಳ ವಿರುದ್ಧ ಸರ್ಕಾರ ಈ ರೀತಿಯ ನಿರ್ಣಯಗಳಿಂದ ಉನ್ನತ ಶಿಣ ವ್ಯವಸ್ಥೆಯಲ್ಲಿ ರಾಜಕೀಯ ಬೆರೆತಂತಾಗಿದೆ. ಕೂಡಲೇ ರಾಜ್ಯ ಸರ್ಕಾರ ಈ ನಿರ್ಣಯವನ್ನು ಕೈ ಬಿಟ್ಟು ಉನ್ನತ ಶಿಣದ ಉನ್ನತಿಕರಣಕ್ಕಾಗಿ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ಮಣಿಕಂಠ ಕಳಸದ, ಪುನೀತ ಬೆನಕನವಾರಿ, ಅರುಣ ಬಾಕಿರ್, ರವಿ ನರೇಗಲ್, ತೇಜಸ್ಸು ಕನವಳ್ಳಿ, ಚಂದು ಪೂಜಾರಿ, ನಿಖಿತಾ ಸುತಾರ ಹಲವರು ಇದ್ದರು.