ತಾಂತ್ರಿಕ ವಿವಿ ಶುಲ್ಕ ಏರಿಕೆಗೆ ಎಬಿವಿಪಿ ವಿರೋಧ

IMG-20221227-WA0037-01
Published on

ತಾಂತ್ರಿಕ ವಿವಿ ಶುಲ್ಕ ಏರಿಕೆಗೆ ಎಬಿವಿಪಿ ವಿರೋಧ

ಚಿತ್ರದುರ್ಗ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಪರೀಕ್ಷಾ ಶುಲ್ಕ ಏರಿಕೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ‌್ಯಕರ್ತರು ನಗರದಲ್ಲಿ ಮಂಗಳವಾರ ಎಡಿಸಿ ಇ.ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು. ನಿಗದಿತ ಶೇ.10ಕ್ಕಿಂತ ಅಧಿಕವಾಗಿ ಏರಿಸಿಕೆ ಮಾಡಿರುವ ಶುಲ್ಕದ ಮೊತ್ತವನ್ನು ಕೂಡಲೇ ಕಡಿತಗೊಳಿಸುವಂತೆ ಆಗ್ರಹಿಸಿದರು.

ಲಕ್ಷಾಂತರ ವಿದ್ಯಾರ್ಥಿಗಳು ಈ ವಿವಿ ಅಧೀನದ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು,ಯಾವುದೇ ನಿಯಮಗಳನ್ನು ಅನು ಸರಿಸದೆ ಏಕಾಏಕಿ ಶುಲ್ಕ ಮಾಡಿರುವುದು ಸರಿಯಲ್ಲ. ಇಂಜಿನಿಯರಿಂಗ್ ಪದವಿ,ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ವನ್ನು ಶೇ.25,ಅಂಕಪಟ್ಟಿ ಶುಲ್ಕವನ್ನು ಶೇ.100,ಡಿಗ್ರಿ ಸರ್ಟಿಫಿಕೇಟ್‌ಗೆ ಶೇ.50

ಶುಲ್ಕ ಏರಿಕೆಯೊಂದಿಗೆ ವಿವಿ ವಿಭಾಗಗಳ ಶುಲ್ಕ ಹೆಚ್ಚಿಸಿ ರುವುದು ವಿದ್ಯಾರ್ಥಿಗಳ ಹಿತಕ್ಕೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಕಾರ‌್ಯಕರ್ತರು,ಶುಲ್ಕು ಹೆಚ್ಚಳ ಹಿಂಪಡೆಯುವಂತೆ ವಿವಿಯನ್ನು ಆಗ್ರಹಿಸಿದರು. ಸಿದ್ದೇಶ್,ಸುದರ್ಶನ್,ಗೋಪಿ,ಕೋಟಿ,ನಾಗೇಶ್,ಲಕ್ಷ್ಮೀ,ಆದರ್ಶ ಮತ್ತಿತರ ಕಾರ‌್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net