

ಉಡುಪಿ: ಮಿಷನ್ ಸಾಹಸಿಯಂತ ರಚನಾತ್ಮಕ ಮತ್ತು ವಿಶಿಷ್ಟವಾದ ಕಾರ್ಯಕ್ರಮ ಆತ್ಮ ರಕ್ಷಣೆ ಕಲೆಯೊಂದಿಗೆ ವಿದ್ಯಾರ್ಥಿನಿಯರಲ್ಲಿ ಆತ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ಉಡುಪಿ ಗ್ರಾಹಕರ ನ್ಯಾಯಾಲಯದ ನ್ಯಾಯಾಧೀಶೆ ಪ್ರೇಮಾ ಹೇಳಿದರು.
ಭಾನುವಾರ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ನಿಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಒಂದು ವಾರ ನಡೆದ ಮಿಷನ್ ಸಾಹಸಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಉಡುಪಿ ನಗರ ಕಾರ್ಯದರ್ಶಿ ಶ್ರೀವತ್ಸ ಡಿ. ಗಾಂವ್ಕಕರ್, ಎಬಿವಿಪಿ ಈಗಾಗಲೇ ದೇಶಾದ್ಯಂತ ಸಾವಿರಾರು ಕಡೆಗಳಲ್ಲಿ ಲಕ್ಷಾಂತರ ವಿದ್ಯಾರ್ಥಿನಿಯರಿಗೆ ಮಿಷನ್ ಸಾಹಸಿ ಕಾರ್ಯಕ್ರಮ ಮೂಲಕ ಸ್ವ ರಕ್ಷಣಾ ಪ್ರಶಿಕ್ಷಣ ನೀಡಿದೆ ಎಂದು ತಿಳಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ, ತಾಲೂಕು ಸಂಚಾಲಕ ಅಜಿತ್ ಜೋಗಿ, ಪ್ರಮುಖರಾದ ನವೀನ್, ಸ್ವಸ್ತಿಕ್, ಅನಂತಕೃಷ್ಣ ಉಪಸ್ಥಿತರಿದ್ದರು.
ಚೂರಿ ಇರಿತ, ಚೈನ್ ಸ್ನಾಚ್ಸಿಂಗ್ ಸಂದರ್ಭ ಮತ್ತು ಅನೇಕ ರೀತಿಯ ಸ್ವ ರಕ್ಷಣಾ ತಂತ್ರಗಳನ್ನು ವಿದ್ಯಾರ್ಥಿನಿಯರು ಪ್ರದರ್ಶನ ನೀಡಿದರು.
ವೇದಿಕೆಯಲ್ಲಿ ಫೀನಿಕ್ಸ್ ಅಕಾಡೆಮಿ ಇಂಡಿಯಾದ ಸದಸ್ಯ ಲಕ್ಷ್ಮಿಕಾಂತ್, ಎಂಜಿಎಂ ವಿದ್ಯಾರ್ಥಿನಿ ನಿಲಯದ ನಿರ್ವಾಹಕಿ ಲತಾ, ಕಾರ್ಯದರ್ಶಿ ಸಾನ್ವಿ ಉಪಸ್ಥಿತರಿದ್ದರು. ಶ್ರವಣಿ ವಂದಿಸಿ, ಮಾಣಿಕ್ಯ ಭಟ್ ನಿರೂಪಿಸಿದರು.