

ಯಾದಗಿರಿ : ಬೆಂಗಳೂರಿನ ಕಾವಲ್ ಭೈರಸಂದ್ರದಲ್ಲಿ ಪೂರ್ವನಿಯೋಜಿತ ಗಲಭೆ ನಡೆಸಲಾಗಿದ್ದು ಸಮಾಜ ಘಾತುಕ ಶಕ್ತಿಗಳ ಈ ದುರ್ವರ್ತನೆ ಖಂಡಿಸಿ ಗುರುವಾರ ಎಬಿವಿಪಿ ಸಂಘಟನೆಯಿಂದ ಇಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಾಂತಿ ಮತ್ತು ಸುವ್ಯವಸ್ಥೆಗೆ ಹೆಸರಾದ ಕನರ್ಾಟಕದಲ್ಲಿ ಜನರ ನೆಮ್ಮದಿ ಕದಡುವ ದೃಷ್ಠಿಯಿಂದ ಭೈರಸಂದ್ರದಲ್ಲಿ ಕೆಲ ಪುಂಡರು ಪೂರ್ವನಿಯೋಜಿತವಾಗಿ ಕೃತ್ಯ ನಡೆಸಿದ್ದಾರೆ. ಸಮಾಜ ಘಾತುಕ ಶಕ್ತಿಗಳಿಗೆ ತಮ್ಮ ಪುಂಡಾಟದ ಮೂಲಕ ಪೊಲೀಸರ ಮೇಲೆ ಮತ್ತು ಪ್ರಜಾತಂತ್ರ ವ್ಯವಸ್ಥೆಯ ಆಧಾರ ಸ್ತಂಭವಾಗಿರುವ ಮಾಧ್ಯಮ ಪ್ರತಿನಿಧಿಗಳ ಮೇಲೆ ಕಲ್ಲು ತೂರಾಟ, ಹಲ್ಲೆ ನಡೆಸಿ ಸಾರ್ವಜನಿಕ ಆಸ್ತಿ ಹಾನಿ ಮಾಡಿರುವುದು ಖಂಡನೀಯ. ರಾಜ್ಯದಲ್ಲಿ ಈ ರೀತಿಯಾಗಿ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿರುವಾಗ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಇಲಾಖೆ ಮತ್ತು ಗುಪ್ತಚರ ಇಲಾಖೆಗಳ ವಿಫಲತೆ ಎದ್ದು ಕಾಣುತ್ತಿದೆ ಎಂದು ಪದಾಧಿಕಾರಿಗಳು ಆರೋಪಿಸಿದರು.
ಘಟನೆ ನಡೆಸಿದ ಪುಂಡರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸರ್ಕಾರ ತಕ್ಷಣವೇ ತನಿಖೆ ಮಾಡಬೇಕು ಮತ್ತು ಘಟನೆಯ ಕುರಿತು ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ಚಿತ್ರಗಳನ್ನು ಸಂಗ್ರಹಿಸಿ ಪುಂಡಾಟಿಕೆಯಲ್ಲಿ ಮುಂಚೂಣಿಯಲ್ಲಿದ್ದವರಿಂದ ಪ್ರಾಥಮಿಕ ಹಂತದ ಮಾಹಿತಿ ಪಡೆದು ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡಿಸಲು ಪ್ರಯತ್ನ ಮಾಡಿದವರಿಗೆ ಕಠಿಣವಾದ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಪ್ರದೇಶದಲ್ಲಿ ಸಾರ್ವಜನಿಕರ ಆಸ್ತಿ ಹಾನಿಮಾಡಿದವರೆ ಅದರ ಒಟ್ಟು ಖರ್ಚನ್ನು ತುಂಬಿಕೊಡಬೇಕೆಂಬ ನಿಯಮವಿದೆ. ಇಂತಹ ಕಠೋರವಾದ ನಿಯಮವನ್ನು ರಾಜ್ಯದಲ್ಲೂ ಜಾರಿಗೆ ತಂದು ನಿನ್ನೆಯ ಘಟನೆಯಲ್ಲಿ ಹಾನಿಯಾದ ಒಟ್ಟು ವೆಚ್ಚವನ್ನು ಸರಕಾರ ಆ ಪುಂಡರಿಂದಲೇ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು. ನಿತೇಶ್ ಕುರಕುಂದಿ, ಭೀಮು ಪೂಜಾರಿ, ವಿಜಯ ಯಳವರ, ಅರುಣ ಚಿಕ್ಕೆ, ರಾಜೀವ ಬೇಗರ್, ರವಿ, ಕೃಷ್ಣ , ಸಾಯಿಕುಮಾರ ಇದ್ದರು