

ಮೈಸೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೈಸೂರು ವಿಭಾಗದ ವತಿಯಿಂದ ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ‘ಬಾಲಿಕಾ ಛಾತ್ರ ಪರ್ವಂ’ ವಿಭಾಗಮಟ್ಟದ ವಿದ್ಯಾರ್ಥಿನಿಯರ ಸಮ್ಮೇಳನ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮೈಸೂರು ನಗರ, ತಿ.ನರಸೀಪುರ, ಹುಣಸೂರು, ಚಾಮರಾಜನಗರ, ಪಿರಿಯಾಪಟ್ಟಣ, ಕೆ.ಆರ್. ನಗರ 500ಕ್ಕೂ ಹೆಚ್ಚು ವಿದ್ಯಾರ್ಥಿನಿರು ಪಾಲ್ಗೊಂಡಿದ್ದರು.
ಸಾಮಾಜಿಕ ಕಾರ್ಯಕರ್ತೆ ಸಾಧನ ತಂತ್ರಿ ಮಾತನಾಡಿ, ನಮಗೆ ಹಿಂದು ರಾಷ್ಟ್ರ ಸುಮ್ಮನೆ ಲಭಿಸಿಲ್ಲ, ಅದರ ಹಿಂದೆ ಸಾಕಷ್ಟು ಜನರ ಪರಿಶ್ರಮವಿದೆ. ಅಂತಹ ಇತಿಹಾಸವನ್ನು ಅರಿತು ಆ ದಾರಿಯಲ್ಲಿ ನಾವೆಲ್ಲರು ಸಾಗುವ ಮೂಲಕ ದೇಶಾಭಿಮಾನ ಹಾಗೂ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ನವಕಿಸ್ ಶಿಕ್ಷಣ ಸಂಸ್ಥೆಯ ಆಳಿತಾಧಿಕಾರಿ ಪ್ರೊ.ರಾಜಲಕ್ಷ್ಮಿ ಅವರು ‘ರಾಷ್ಟ್ರದ ಪುನರ್ ನಿರ್ಮಾಣದಲ್ಲಿ ವಿದ್ಯಾರ್ಥಿನಿಯರ ಪಾತ್ರ ಮತ್ತು ಮಹಿಳಾ ಸಬಲೀಕರಣ’ ವಿಷಯದ ಕುರಿತು ಮಾತನಾಡಿದರು.
ಅಂತಾರಾಷ್ಟ್ರೀಯ ಖೋ -ಖೋ ಪಟು ಬಿ.ಚೈತ್ರಾ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಯಾತ್ರೆ ನಡೆಯಿತು. ಪ್ರಾಂತ ವಿದ್ಯಾರ್ಥಿನಿ ಪ್ರಮುಖರಾದ ಸುಧಾ ಶೆಣೈ, ವಿಭಾಗ ವಿದ್ಯಾರ್ಥಿನಿ ಪ್ರಮುಖರಾದ ವಸಂತಾ, ಪ್ರಾಂತ ಕಾರ್ಯಸಮಿತಿ ಸದಸ್ಯರಾದ ಡಿ.ಎ.ದೀಪಿಕಾ, ಇಂಚರಾ ಹಾಗೂ ಇತರರು ಇದ್ದರು.