ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಬಿವಿಪಿ ಮನವಿ

CTD 4 ABVPppp
Published on

ಚಿತ್ರದುರ್ಗ:ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮೂಲ ಸೌಕರ್ಯಗಳನ್ನು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿ ಕಾರ‌್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಸಮಾಜ ಕಲ್ಯಾಣ ಇಲಾಖೆ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ವಿದ್ಯಾರ್ಥಿನಿಲಯಗಳಲ್ಲಿ ನಿರ್ವಹಣೆ ಸರಿಯಾಗಿಲ್ಲ ಹಿ ರಿಯ ಅಧಿಕಾರಿಗಳು,ಇಲ್ಲಿಯ ಸಮಸ್ಯೆಗಳನ್ನು ಬಗೆಹರಿಸದೆ ನಿರ್ಲಕ್ಷೃ ತೋರಿಸುತ್ತಿದ್ದಾರೆ. ಸಾರಿಗೆ ಸಚಿವರು,ಕೆಎಸ್‌ಆರ್‌ಟಿಸಿ ಅಧ್ಯಕ್ಷರು

ಜಿಲ್ಲೆಯವರೇ ಆಗಿದ್ದರೂ,ಜಿಲ್ಲಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಹೋಗಿ ಬಂದು ಹೋಗಲು ಬಸ್ಸಿನ ಸೌಕರ್ಯಗಳಿಲ್ಲವೆಂದು ಅಸಮಾಧಾನ ವ್ಯಕ್ತ ಪಡಿಸಿದ ಕಾರ‌್ಯಕರ್ತರು,ಕೂಡಲೇ ವಿದ್ಯಾಭ್ಯಾಸಕ್ಕೆ ಪೊರಕ ಸೌಕರ್ಯಗಳನ್ನು ಒದಗಿಸುವಂತೆ ಸಚಿವರನ್ನು ಒತ್ತಾಯಿಸಿದರು. ಪರಿಷತ್ ಕಾರ‌್ಯಕರ್ತರಾದ ಆದರ್ಶ,ಮಂಜುನಾಥ್ ಕೊಳ್ಳೇರ್,ಸಿದ್ದೇಶ್,ಗೋಪಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net