

ತೀರ್ಥಹಳ್ಳಿ: ಶಾಸನ ಸಭೆಯ ಸದಸ್ಯರಾಗಿ ಸಂವಿಧಾನದ ಮೇಲೆ ಪ್ರತಿಜ್ಞೆ ಮಾಡಿರುವ ಶಾಸಕ ಆರಗ ಜ್ಞಾನೇಂದ್ರ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾಡಿರುವ ಅವಹೇಳನಕಾರಿ ಮಾತುಗಳು ಸಂವಿಧಾನ ವಿರೋಽಯಾಗಿದ್ದು ನೂರು ವರ್ಷ ಹಿಂದಿನ ವರ್ಣಭೇದ ನೀತಿಯನ್ನು ನೆನಪಿಸುವಂತಿದೆ ಎಂದು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥಗೌಡ ಆರೋಪಿಸಿದ್ದಾರೆ.
ಸುಮಾರು ನಾಲ್ಕುವರೆ ದಶಕಗಳಿಂದ ಸಾರ್ವಜನಿಕ ಸೇವೆಯಲ್ಲಿದ್ದು ಮಹತ್ವದ ಹುದ್ದೆಗಳನ್ನು ಹೊಂದಿರುವ ಶಾಸಕರು ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಮಾತನಾಡುವ ವೇಳೆ ರಾಷ್ಟಿçÃಯ ಮಟ್ಟದ ದಲಿತ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ವ್ಯಕ್ತಿಗತವಾಗಿ ವ್ಯಂಗ್ಯ ಮಾಡುವ ಮಟ್ಟಕ್ಕೆ ಇಳಿದಿರುವುದು ವಿಷಾಧನೀಯ ಸಂಗತಿ. ಕುವೆಂಪು, ಅನಂತಮೂರ್ತಿಯAತವರು ಜನಿಸಿದ ಈ ನೆಲಕ್ಕೂ ಅವಮಾನವಾಗಿದೆ. ಈ ಬಗ್ಗೆ ಇಲ್ಲಿನ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಽಕಾರಕ್ಕೆ ಬಂದು ಕೇವಲ ಎರಡು ತಿಂಗಳು ಕಳೆದಿದೆ. ಅದಕ್ಕೆ ಮುನ್ನ ರಾಜ್ಯದಲ್ಲಿಯೂ ಬಿಜೆಪಿಯವರೇ ಆಡಳಿತದಲ್ಲಿದ್ದರು ಎಂಬುದನ್ನು ಜನರು ಅರ್ಥೈಸಿಕೊಳ್ಳಬೇಕು. ಅಂಬಾನಿ ಕುಟುಂಬದಲ್ಲಿ ಮಗು ಜನಿಸಿದ್ದನ್ನು ನೋಡಲು ಹೋಗುವ ಪ್ರದಾನಿ ನರೇಂದ್ರ ಮೋದಿಯವರಿಗೆ ದೆಹಲಿಗೆ ಹತ್ತಿರದಲ್ಲೇ ನಡೆದಿದ್ದ ರೈತರ ಮೇಲಿನ ಹಲ್ಲೆ ನಡೆದ ಸ್ಥಳಕ್ಕೆ ಭೇಟಿ ನೀಡಲು ಕಾಲಾವಕಾಶ ಇಲ್ಲದಿರುವುದು ಆ ಪಕ್ಷದವರಿಗೆ ರೈತರ ಮೇಲೆ ಇರುವ ಕಾಳಜಿಯ ದ್ಯೋತಕವಾಗಿದೆ ಎಂದೂ ಹೇಳಿದರು.
ಪಕ್ಷದ ಮುಖಂಡರಾದ ಕೆಸ್ತೂರು ಮಂಜುನಾಥ್, ಡಿಎಸ್.ವಿಶ್ವನಾಥಶೆಟ್ಟಿ, ಟಿ.ಎಲ್.ಸುಂದರೇಶ್, ಬಿ.ಎಸ್.ಎಲ್ಲಪ್ಪ, ಮಂಜುಳಾ ನಾಗೇಂದ್ರ, ಹಷೇಂದ್ರ ಪಡುವಳ್ಳಿ, ಕೇಳೂರು ಮಿತ್ರಾ, ನವೀನ್ ಕುಮಾರ್ ಇದ್ದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಇಬ್ಬರು ನಾಯಕರ ವಿರುದ್ಧ ಅಗೌರವವಾಗಿ ಹೇಳಿಕೆ ನೀಡಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ.| ಬಿ.ಎ.ರಮೇಶ್ ಹೆಗ್ಡೆಕೆಪಿಸಿಸಿ ವಕ್ತಾರ