

ನರೇಂದ್ರ ಎಸ್.ಮರಸಣಿಗೆ, ಹೆಬ್ರಿ
ಹೆಬ್ರಿ ತಾಲೂಕಿನ ಕೃಷಿಕರಿಗೆ ಉಪಯೋಗವಾಗಲೆಂದು ಚಾರ ನವೋದಯ ಶಾಲೆ ಬಳಿ ಸೀತಾನದಿಗೆ ಪಶ್ಚಿಮವಾಹಿನಿ ಯೋಜನೆಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಸಹಿತ ಕಿಂಡಿಅಣಿಕಟ್ಟುವಿನಲ್ಲಿ ಸಮೃದ್ಧವಾದ ಜಲ ತುಂಬಿದೆ. ಇದರಿಂದ ಬೇಸಿಗೆಯಲ್ಲೂ ಕೃಷಿಕರಿಗೆ, ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿಲ್ಲ.
110 ಮೀಟರ್ ಉದ್ದದ, 12 ಮೀಟರ್ ಅಗಲದ ಅಣಿಕಟ್ಟು ನಿರ್ಮಿಸಲಾಗಿದೆ. ಈ ಭಾಗದ ಬಹುತೇಕ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಅಂತರ್ಜಲ ವೃದ್ಧಿ, ಕೃಷಿಕರು ತೋಟಗಳಿಗೆ ನೀರು ಹಾಯಿಸಲು, ಬಾವಿಯಲ್ಲಿ ನೀರಿನ ಹರಿವು ಹೆಚ್ಚಲು, ಕುಡಿಯುವ ನೀರಿನ ಪೂರೈಕೆಗೆ ಉಪಯೋಗವಾಗಲಿದೆ. ಕಿಂಡಿ ಅಣಿಕಟ್ಟು ನಿರ್ಮಾಣದಿಂದ 800 ಹೆಕ್ಟೇರ್ ಪ್ರದೇಶಗಳಿಗೆ ಉಪಯೋಗವಾಗಲಿದೆ.
ಸ್ವಯಂ ಚಾಲಿತ ಗೇಟುಗಳು: ಈ ಅಣೆಕಟ್ಟಿನಲ್ಲಿ 3 ಹಾಗೂ 5 ಮೀಟರ್‌ನ ಎರಡು ಸ್ತರದಲ್ಲಿ ನೀರು ಶೇಖರಣೆಗೆ ವ್ಯವಸ್ಥೆ ಇದೆ. 20.41 ಎಂಸಿಎಫ್‌ಟಿ ನಷ್ಟು ನೀರು ಶೇಖರಣೆಯಾಗುತ್ತದೆ. ಎಂಟು ಸ್ವಯಂ ಚಾಲಿತ ಗೇಟುಗಳಿದ್ದು, ವ್ಯವಸ್ಥಿತ ರೀತಿಯಲ್ಲಿ ಅಳವಡಿಸಲಾಗಿದೆ. 5 ಮೀಟರ್ ಸಂಗ್ರಹವಾದ ನೀರು: ಅಣೆಕಟ್ಟಿನಲ್ಲಿ 5 ಮೀಟರ್ ನೀರು ಸಂಗ್ರಹವಾಗಿದೆ. ಜನವರಿಯಲ್ಲಿ ಸಣ್ಣಪುಟ್ಟ ಲೋಪದಿಂದ ಕೃಷಿ ಭೂಮಿ ಮುಳುಗಡೆಯಾಗಿತ್ತು. ಆದರೆ ಸಂಬಂಧಪಟ್ಟವರು ಸೂಕ್ತ ಕ್ರಮವನ್ನು ಕೈಗೊಂಡರು. ಆಗಾಗ ಬರುತ್ತಿರುವ ಮಳೆಯಿಂದಾಗಿ ಸೀತಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಅಣೆಕಟ್ಟಿನಲ್ಲಿ ಐದು ಮೀಟರ್ ನೀರು ಶೇಖರಣೆಯಾಗಿದೆ.
ಈ ಹಿಂದೆ ಈ ಜಾಗದಲ್ಲಿ ಇದ್ದ ಸೇತುವೆ 1965ರಲ್ಲಿ ಅಂದರೆ 59 ವರ್ಷಗಳ ಹಿಂದೆ 4.30 ಲಕ್ಷ ರೂ. ವೆಚ್ಚದಲ್ಲಿ ಅಂದಿನ ಮೈಸೂರು ಸರ್ಕಾರದ ಕಾಲದಲ್ಲಿ ನಿರ್ಮಾಣವಾಗಿತ್ತು. ಕೆಲವೆಡೆ ಶಿಥಿಲವಾಗಿದ್ದು ಬಿಟ್ಟರೆ ಸೇತುವೆ ದುರ್ಬಲವಾಗಿರಲಿಲ್ಲ.
ಇದು ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಬಂದ ಮಹತ್ವಕಾಂಕ್ಷಿ ಯೋಜನೆ. ಅಣೆಕಟ್ಟಿನಲ್ಲಿ ಸಂಗ್ರವಾಗುವ ನೀರಿನಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ಉಪಯೋಗವಾಗಲಿದೆ. ತಾಲೂಕಿನ ಚಾರ ಕುಚ್ಚೂರು, ಬೇಳಂಜೆ, ಹೆಬ್ರಿ ಜನರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ. ಅಂತರ್ಜಲ ವೃದ್ಧಿಯಿಂದ ಕುಡಿಯುವ ನೀರಿಗೆ ದೊಡ್ಡ ಶಕ್ತಿ ಬಂದಂತಾಗಿದೆ. ಸುನೀಲ್ ಕುಮಾರ್, ಶಾಸಕರು ಕಾರ್ಕಳ ಚಾರದಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟು ಸಹಿತ ಸೇತುವೆ ಅತ್ಯಂತ ಗುಣಮಟ್ಟದ ಕಾಮಗಾರಿ ನಡೆದಿದೆ. ಇದರಿಂದಾಗಿ ಬಹಳಷ್ಟು ರೈತರಿಗೆ ನೆರವಾಗುತ್ತದೆ. ಅಂತರ್ಜಲ ಮಟ್ಟ ಹೆಚ್ಚಾಗಿ ಎಲ್ಲ ಬಾವಿಯಲ್ಲಿ ನೀರು ಹೆಚ್ಚಾಗಿದೆ. ಇದೊಂದು ವ್ಯವಸ್ಥಿವಾದ ಕಾಮಗಾರಿ. ಕಿರಣ್ ತೋಳಾರ್ ಕುಚ್ಚೂರು, ಅಧ್ಯಕ್ಷರು, ಉಡುಪಿ ಜಿಲ್ಲಾ ರೈತ ಸಂಘ ಹೆಬ್ರಿ ತಾಲೂಕು ಘಟಕ. https://www.vijayavani.net/cultural-talent-is-the-true-glory-of-kuvempu-kannada https://www.vijayavani.net/sacrifice-celebration-at-rosary-mata-church