

ಮಾನ್ವಿ: ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ನಾಗರ ಪಂಚಮಿ ಅಂಗವಾಗಿ ಮಹಿಳೆಯರು ಮಕ್ಕಳು ನಾಗದೇವತೆಗೆ ಹಾಲು ಎರೆದು ಭಕ್ತಿ ಸಮರ್ಪಿಸಿದರು.
ಪಟ್ಟಣದ ಈಶ್ವರ ಗುಡಿ, ಪಂಪಾ ಉದ್ಯಾನವನ ಹತ್ತಿರ ಮತ್ತು ಗ್ರಾಮೀಣ ಪ್ರದೇಶಗಳ ವಿವಿಧ ದೇವಸ್ಥಾನಗಳಲ್ಲಿ ಹಾಲೆರೆದು ವಿವಿಧ ಸಿಹಿ ಉಂಡಿಗಳನ್ನು ನಾಗಪ್ಪಗೆ ನೈವೇದ್ಯ ಅರ್ಪಿಸಿದರು. ಉತ್ತಮವಾದ ಮಳೆ, ಬೆಳೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.