ಯುವಕರಿಗೆ ಸೇನೆಯಲ್ಲಿ ವಿಪುಲ ಅವಕಾಶ, ಸೆಮಿನಾರ್‌ನಲ್ಲಿ ನೌಕಾಸೇನೆಯ ಅಧಿಕಾರಿ ಸುಧೀರ್ ಪೈ ಹೇಳಿಕೆ

NDA
ಸೆಮಿನಾರ್‌ನಲ್ಲಿ ಭಾರತೀಯ ನೌಕಾಸೇನೆಯ ಧಿಕಾರಿ ಸುಧೀರ್ ಪೈ, ವಾಯುಸೇನೆಯ ನಿವೃತ್ತ ಅಧಿಕಾರಿ ಮಧುಕರ ಭಾಗವತ್, ಭಾರತೀಯ ನೌಕಾಸೇನೆಯ ಕಮಾಂಡರ್ ಕ್ಲಾಡ್ ಲೋಬೊ ಅವರನ್ನು ಗೌರವಿಸಲಾಯಿತು. ಶ್ರುತ ಸಂಸ್ಥೆಯ ಡಾ.ಶ್ರುತಕೀರ್ತಿರಾಜ ಉಪಸ್ಥಿತರಿದ್ದರು.
Published on

ಮಂಗಳೂರು: ಭಾರತೀಯ ಸೇನೆಯಲ್ಲಿ ದೊರೆಯುವ ಅವಕಾಶ, ಗೌರವ, ಸವಲತ್ತುಗಳು ಬೇರೆ ಯಾವ ವೃತ್ತಿಯಲ್ಲೂ ದೊರೆಯಲು ಸಾಧ್ಯವಿಲ್ಲ. ಹೊಸ ತಲೆಮಾರಿನ ಯುವಕರಿಗೆ ಸೇನೆಯಲ್ಲಿ ಬೆಳೆಯಲು ವಿಪುಲವಾದ ಅವಕಾಶಗಳಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ ಇನ್ನಾವುದೇ ಪದವಿ ಬಳಿಕ ವಿದ್ಯಾರ್ಥಿಗಳು ಸೇನೆಗೆ ಸೇರಬಹುದು. ಹೆತ್ತವರು ಆತಂಕ ಪಡದೆ ಮಕ್ಕಳನ್ನು ಸೇನೆಗೆ ಕಳುಹಿಸಬಹುದು ಎಂದು ಭಾರತೀಯ ನೌಕಾಸೇನೆಯ ಅಧಿಕಾರಿ ಸುಧೀರ್ ಪೈ ಹೇಳಿದರು.

ಮಂಗಳೂರಿನ ಕೊಡಿಯಾಲಬೈಲ್‌ನ ಶ್ರುತ ಅಕಾಡೆಮಿಯಲ್ಲಿ ಎನ್‌ಡಿಎ ಮತ್ತು ತತ್ಸಂಬಂಧಿ ಪರೀಕ್ಷೆಗಳ ಕುರಿತ ಸೆಮಿನಾರ್ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಉಪನ್ಯಾಸ ನೀಡಿದರು.

ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿ ಮಧುಕರ ಭಾಗವತ್, ನೌಕಾಸೇನೆಯ ಕಮಾಂಡರ್ ಕ್ಲಾಡ್ ಲೋಬೊ ಹಾಜರಿದ್ದರು. ಈ ಮೂವರೂ ಸೇನಾ ಸಾಧಕರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಡಾ.ಶ್ರುತಕೀರ್ತಿರಾಜ ಸ್ವಾಗತಿಸಿ, ಉಪನ್ಯಾಸಕ ಪದ್ಮನಾಭ ವಂದಿಸಿದರು. ಉಪನ್ಯಾಸಕ ರಮೇಶ ಕೆ.ಜಿ. ಅತಿಥಿಗಳನ್ನು ಪರಿಚಯಿಸಿದರು.

ಸೇನೆಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶ್ರುತ ಅಕಾಡೆಮಿ ತರಬೇತಿ ನೀಡುತ್ತದೆ. ಆಸಕ್ತರು ಮೊ.ನಂ: 9448502994 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net