ಜಾಹೀರಾತು ಉದ್ಯಮದಲ್ಲಿ ವಿಫುಲ ಅವಕಾಶ

h25-bright business
Published on

ಹುಬ್ಬಳ್ಳಿ: ನಗರದ ಬ್ರೈಟ್ ಬಿಜಿನೆಸ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ 2 ದಿನಗಳ ಜಾಹೀರಾತು ಮತ್ತು ಬ್ರ್ಯಾಂಡಿಂಗ್ ‘ಎಡಿ-ಮೇನಿಯಾ 2ಕೆ25’ ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜ್ ತಂಡಗಳು ಭಾಗವಹಿಸಿ, ಜಾಹೀರಾತು ಕ್ಷೇತ್ರದಲ್ಲಿ ಕಲಿಕೆ ಅನುಭವ ವಿನಿಮಯದೊಂದಿಗೆ ಸಂಪನ್ನಗೊಂಡಿತು.

ವೀ ಟೆಕ್ ವಾಲ್ವ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಟೈ ಹುಬ್ಬಳ್ಳಿ ಅಧ್ಯಕ್ಷ ಗಿರೀಶ ಮಾನೆ ಮಾತನಾಡಿ, ಜಾಹೀರಾತು ಉದ್ಯಮದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಸಂಪರ್ಕ, ಸೃಜನಶೀಲತೆ, ಕಲಿಕಾನುಭವ, ತಂತ್ರಜ್ಞಾನ, ಹೊಸತನಕ್ಕೊಂದಿಕೊಳ್ಳುವವರು ಯಶಸ್ವಿ ವೃತ್ತಿ ಜೀವನ ರೂಪಿಸಿಕೊಳ್ಳಬಹುದು ಎಂದರು.

ಉತ್ತರ ಕರ್ನಾಟಕದ ಪದವಿಪೂರ್ವ ಕಾಲೇಜ್‌ಗಳ 18 ತಂಡಗಳು ಬ್ರೈನ್ ಬಸ್ಟರ್ಸ್, ಬ್ರಾಂಡ್ ದಿ ಅನ್‌ಬ್ರಾಂಡೆಡ್ ಮತ್ತು ಬ್ರಾಂಡ್ ಗ್ರೇವ್ಯಾರ್ಡ್‌ನ ಮೂರು ಉಪ-ಈವೆಂಟ್‌ಗಳಲ್ಲಿ ಭಾಗವಹಿಸಿದ್ದವು. ಕೆಲವರು ಕಲಿಕೆಯ ಅನುಭವ ಹಂಚಿಕೊಂಡರು.

ಕೆಎಲ್ಇ ಕಾಲೇಜ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್‌ನ ತಂಡವು ಎಲ್ಲ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಜನರಲ್ ಚಾಂಪಿಯನ್‌ಶಿಪ್ ಟ್ರೋಫಿ ಗೆದ್ದುಕೊಂಡಿತು.

ಬ್ರೈಟ್ ಬಿಜಿನೆಸ್ ಸ್ಕೂಲ್ ನಿರ್ದೇಶಕ ಡಾ. ಪ್ರಸಾದ ರೂಡಗಿ, ಅನಿಲ್ ಲಿಂಗ್‌ಶೆಟ್ಟರ್, ಗಿರೀಶ ಮಾನೆ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮ ಸಂಯೋಜಕರಾದ ಪ್ರೊ. ನಿತಿನ್ಚಂದ್ರ, ಸೃಷ್ಟಿ, ಅಮೀನಾ, ಪ್ರೊ.ಜಿ.ಬಿ. ಹಳ್ಯಾಳ, ಬಸವರಾಜ ಲಿಂಗಾಶೆಟ್ಟರ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net