

ಮೈಸೂರು: ಹೋಟೆಲ್ ಉದ್ಯಮದಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳಿವೆ. ಯುವ ಉದ್ಯಮಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ಜಿಲ್ಲಾ ಹೋಟೆಲ್ ವಾಲೀಕರ ಪತ್ತಿನ ಸಹಕಾರ ಸಂಘದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸಹಕಾರ ಮಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಾತನಾಡಿದರು.
ಹೋಟೆಲ್ ಉದ್ಯಮ ವಿಸ್ತಾರವಾಗಿ ಬೆಳವಣಿಗೆ ಕಂಡಿದ್ದು, ಇದು ಜನಜೀವನದ ಒಂದು ಭಾಗವೂ ಆಗಿದೆ. ಹೀಗಾಗಿ, ಈ ಉದ್ಯಮ ಯಾವತ್ತೂ ತನ್ನ ಮಾರುಕಟ್ಟೆಯನ್ನು ಕಳೆದುಕೊಳ್ಳಲ್ಲ. ಹೋಟೆಲ್‌ಗಳು ಎಲ್ಲೆಡೆ ದೊರೆಯುತ್ತವೆ. ಅದು ಎಲ್ಲರಲ್ಲೂ ಹಾಸುಹೊಕ್ಕಾಗಿದೆ. ಹೋಟೆಲ್ ಇಲ್ಲ ಎಂಬುದನ್ನು ಊಹಿಸಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕ್ಷೇತ್ರ ಬೆಳವಣಿಗೆಗೆ ವೃತ್ತಿ ಕೌಶಲ ಅಗತ್ಯವಾಗಿದ್ದು, ಇದರಲ್ಲಿ ತೊಡಗಿರುವ ಪ್ರತಿಯೊಬ್ಬರೂ ಕುಶಲತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸ್ಥಳೀಯ ಸಂಸ್ಥೆಗಳ ನಿಯಮಗಳು ಮತ್ತು ತೆರಿಗೆ ನೀತಿಗಳು ಹೋಟೆಲ್ ಉದ್ಯಮದ ಪ್ರಗತಿಗೆ ಅಡ್ಡಿಯಾಗಿದೆ. ಇದನ್ನು ಸರಳೀಕರಣಗೊಳಿಸಬೇಕು. ಜತೆಗೆ, ಸಣ್ಣ ಉದ್ಯಮ ಉತ್ತೇಜನಕ್ಕಾಗಿ ಉದಾತ್ತವಾದ ನೀತಿಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ನಾರಾಯಣ ವಿ.ಹೆಗಡೆ ವಾತನಾಡಿ, ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಜನರ ಬದುಕು ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಹೋಟೆಲ್ ಕ್ಷೇತ್ರವನ್ನು ಅವಲಂಬಿಸಿದೆ. ಆದ್ದರಿಂದ ಹೋಟೆಲ್ ಉದ್ಯಮದ ಅಭಿವೃದ್ಧಿಗೆ ಪೂರಕವಾಗಿ ಮೂಲ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಹೋಟೆಲ್ ಉದ್ಯಮಿಗಳಾದ ರಾಮಕೃಷ್ಣ ಹೆಬ್ಬಾರ್, ಆರ್.ಮುರಳೀಧರನ್, ಜಿ.ಜಿ.ರಾಘವನ್ ಅವರಿಗೆ ಸಹಕಾರ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅರ್ಕಧಾಮದ ಸ್ಥಾಪಕ ಶ್ರೀನಿವಾಸ ಅರ್ಕ ಗುರೂಜಿ ವಾತನಾಡಿದರು.
ಸಂಘದ ಉಪಾಧ್ಯಕ್ಷ ಆನಂದ ಎಂ. ಶೆಟ್ಟಿ, ನಿರ್ದೇಶಕ ಸಿ.ನಾರಾಂುಣಗೌಡ, ವಿ.ಎಸ್.ಶಾಸ್ತ್ರಿ, ಸುಬ್ರಮಣ್ಯ ಆರ್. ತಂತ್ರಿ, ಪಿ.ನಾರಾಂುಣ ಕುಂದರ್, ಎಂ.ರಘುವೀರ್ ಪುರಾಣಿಕ್, ಕೆ.ಸಿ.ವಿಶ್ವಾನಂದ ಭಟ್, ಎಂ.ಎಸ್.ಜಯಪ್ರಕಾಶ್, ಹೇಮಂತ್ ಕುವಾರ್, ಸುಮಿತ್ರಾ ಎ.ತಂತ್ರಿ ಇದ್ದರು