

ಚಿಕ್ಕೋಡಿ: ಸ್ಪರ್ಧಾತ್ಮಕ ಯುಗದಲ್ಲಿ ಅತ್ಯಧಿಕ ಉದ್ಯೋಗಾವಕಾಶ ನೀಡುವ ವಾಣಿಜ್ಯ ವಲಯದ ಸದುಪಯೋಗ ಪಡೆದು ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ಸಿದ್ಧಿ ವಿನಾಯಕ ಸಹಕಾರಿ ಬ್ಯಾಂಕಿನ ಸಂಸ್ಥಾಪಕ, ಸಿಟಿಇ ಸಂಸ್ಥೆಯ ನಿರ್ದೇಶಕ ಸಂಜಯ ಅಡಕೆ ಹೇಳಿದರು.
ಪಟ್ಟಣದ ಆರ್.ಡಿ. ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಈಚೆಗೆ ಆಯೋಜಿಸಿದ್ದ ವಾಣಿಜ್ಯ ದಿನಾಚರಣೆ ಹಾಗೂ ವಾಣಿಜ್ಯ ಪ್ರದರ್ಶನದ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಸಿಟಿಇ ಸಂಸ್ಥೆಯ ಉಪಾಧ್ಯಕ್ಷ ವಿಜಯ ಮಾಂಜರೇಕರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಂಚಾಲಕ ಕಿರಣ ಕುಲಕರ್ಣಿ ವಾಣಿಜ್ಯ ಪ್ರದರ್ಶನದ ಉದ್ಘಾಟಿಸಿದರು. ಕಳೆದ ವರ್ಷ ನಿವೃತ್ತರಾದ ಪಿ.ಎ. ಕುಲಕರ್ಣಿ, ಸಿ.ಜಿ. ಕೋಲಕಾರ ಹಾಗೂ ಸಿ.ಎ. ಫೌಂಡೇಷನ್, ಸಿ.ಎಂ.ಎ. ಫೌಂಡೇಷನ್ ಪರೀಕ್ಷೆಗಳಲ್ಲಿ
ಯಶಸ್ವಿಯಾದ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಹಾವಿದ್ಯಾಲಯಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾಥಿಗಳನ್ನು ಸತ್ಕರಿಸಲಾಯಿತು.
ಪ್ರಾಚಾರ್ಯ ಯು.ಎಸ್. ಶಿಂಧೆ, ಹಿರಿಯ ಉಪನ್ಯಾಸಕ, ಎನ್.ವಿ. ಶಿರಗಾಂವಕರ, ಪಿ.ಆರ್. ಮನಗೂಳಿ, ಆರ್.ಆರ್.ಓತಾರಿ, ಜಿ.ಬಿ. ಪಾಟೀಲ, ಎ.ಎಲ್. ಮಾನೆ, ಆರ್.ಎಸ್.ಪಾಟೀಲ ಇದ್ದರು. ಸಂಜನಾ ಚೌಗಲಾ ಸ್ವಾಗತಿಸಿದರು. ಉಷಾಕಿರಣ ತರತರಿ, ಹನೀಫಾ ಜಮಾದಾರ್ ನಿರೂಪಿಸಿದರು. ವಿಶ್ವನಾಥ ಮನ್ನೋಳಿಮಠ ವಂದಿಸಿದರು.