ಅಬುಧಾಬಿಗೆ ಹೆಚ್ಚುವರಿ ವಿಮಾನ ಹಾರಾಟ ಆರಂಭ

mng-19july-flight
Published on



ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಆ.9ರಿಂದ ಸಾಪ್ತಾಹಿಕ ವಿಮಾನ ಹಾರಾಟ 4 ರಿಂದ 14ಕ್ಕೆ ಏರಿಕೆಯಾಗಲಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜು.22ರಿಂದ ಅಬುಧಾಬಿಗೆ ತನ್ನ ವಿಮಾನಗಳ ಆವರ್ತನವನ್ನು ಹೆಚ್ಚಿಸಲಿದೆ. ಜು.22 ರಿಂದ ಅಬುಧಾಬಿಗೆ ರಾತ್ರಿ 8.15 ಕ್ಕೆ ಹೊರಡುವ ವಿಮಾನ ಐಎಕ್ಸ್ 819 ಅನ್ನು ಪರಿಚಯಿಸುವುದರೊಂದಿಗೆ ದೈನಂದಿನ ಆವರ್ತನ ಹೆಚ್ಚಳ ಪ್ರಾರಂಭವಾಗಲಿದೆ. ಒಳಬರುವ ವಿಮಾನ ಐಎಕ್ಸ್ 820 ಬೆಳಗ್ಗೆ 5.20 ಕ್ಕೆ ಬರಲಿದೆ. ಈ ಹೊಸ ವಿಮಾನವು ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಂಗಳೂರಿನಿಂದ ನಿರ್ಗಮಿಸಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಬುಧಾಬಿ, ಬಹ್ರೇನ್, ದುಬೈ, ದಮನ್, ದೋಹಾ, ಜೆಡ್ಡಾ, ಕುವೈತ್ ಮತ್ತು ಮಸ್ಕತ್‌ಗೆ ಪಯಣಿಸಲಿದೆ.
ಇಂಡಿಗೊ ಆ.9ರಂದು ಅಬುಧಾಬಿಗೆ ದೈನಂದಿನ ವಿಮಾನ ಯಾನ ಪ್ರಾರಂಭಿಸಲಿದೆ. ಫ್ಲೈಟ್ 6 ಇ 1443 ಅಬುದಾಬಿಯಿಂದ
ಸಾಯಂಕಾಲ 4 ಕ್ಕೆ ಆಗಮಿಸಲಿದ್ದು, ರಾತ್ರಿ 9.40 ಕ್ಕೆ ಫ್ಲೈಟ್ 6 ಇ 1442 ಆಗಿ ಅಬುಧಾಬಿಗೆ ಮರಳಲಿದೆ. ಇದರಿಂದ ಅಬುಧಾಬಿಗೆ ಸಾಪ್ತಾಹಿಕ ವಿಮಾನಗಳ ಯಾನ ಪ್ರಸ್ತುತ 4 ರಿಂದ 14 ಕ್ಕೆ ಏರಿಕೆಯಾಗಲಿದೆ.
ದೇಶೀಯ ವಲಯದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜು. 22 ರಿಂದ ಬೆಂಗಳೂರಿಗೆ ವಿಮಾನ ಪರಿಚಯಿಸಲಿದೆ. ಐಎಕ್ಸ್ 1789 ವಿಮಾನವು ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಾಯಂಕಾಲ 6.45 ಕ್ಕೆ ಮಂಗಳೂರಿಗೆ ತಲುಪಲಿದ್ದು, ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಿಗ್ಗೆ 7.05 ಕ್ಕೆ ಫ್ಲೈಟ್ 1780 ಆಗಿ ಬೆಂಗಳೂರಿಗೆ ಹೊರಡಲಿದೆ.
ಅಂತಾರಾಷ್ಟ್ರೀಯ ಮತ್ತು ದೇಶೀಯ ವಲಯಗಳೆರಡರಲ್ಲೂ ವಿಮಾನಗಳ ಹೆಚ್ಚಳವು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಾಪ್ತಾಹಿಕ ವಿಮಾನ ಸಂಚಾರವನ್ನು ಪ್ರಸ್ತುತ 276ರಿಂದ 344 ಕ್ಕೆ ಹೆಚ್ಚಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net