ನಶ್ವರ ಜೀವನದಲ್ಲಿ ಹಗೆತನದಿಂದ ದೂರವಿರಿ

Ull_Diwali
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಗ್ಯಾರಂಟಿಯೇ ಇಲ್ಲದ ನಶ್ವರ ಜೀವನದಲ್ಲಿ ಪರಸ್ಪರ ಪ್ರೀತಿಸುವ ಗುಣ ಬೆಳೆಸಿಕೊಂಡರೆ ಹಗೆತನ, ದೊಂಬಿ, ಕಚ್ಚಾಟಕ್ಕೆ ಅವಕಾಶ ಇಲ್ಲ ಎಂದು ಜವಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಹೇಳಿದರು.

ಉಳ್ಳಾಲ ಪೊಸಕುರಲ್ ಬಳಗ, ಸದ್ಭಾವನಾ ವೇದಿಕೆ, ಬಿಲ್ಲವ ಸೇವಾ ಸವಾಜ ಟ್ರಸ್ಟ್, ಕೊಲ್ಯ ಬಿಲ್ಲವ ಸೇವಾ ಸವಾಜ, ಯುವವಾಹಿನಿ, ರೋಟರಿ ಸಮುದಾಯ ದಳ, ಜವಾಅತೆ ಇಸ್ಲಾಮಿ ಹಿಂದ್ ಮತ್ತು ನವೋದಯ ಫ್ರೆಂಡ್ಸ್ ಆಶ್ರಯದಲ್ಲಿ ಕೊಲ್ಯದಲ್ಲಿ ಗುರುವಾರ ‘ಸೌಹಾರ್ದ ದೀಪಾವಳಿ ಸಂಗಮ’ದಲ್ಲಿ ಸೌಹಾರ್ದ ಸಂದೇಶ ನೀಡಿದರು.

ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಉಳ್ಳಾಲ ವ್ಯಾಪ್ತಿಯ ಸಾಧಕರು, ಸಂಘಟನೆಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಹಾಗೂ ಹಿರಾ ಶಾಲೆಯ ಮುಖ್ಯಶಿಕ್ಷಕಿ ಮಂಜುಳಾ ಕುವಾರಿ ಅವರನ್ನು ಸನ್ಮಾನಿಸಲಾಯಿತು.

ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‌ನ ಪ್ರಧಾನ ಧರ್ಮಗುರು ಫಾ.ಸಿಪ್ರಿಯನ್ ಪಿಂಟೋ ಉದ್ಘಾಟಿಸಿದರು. ನಿವೃತ್ತ ಸೇನಾನಿ ಕೃಷ್ಣ ಗಟ್ಟಿ ಅಡ್ಕ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧಿಕಾರಿ ಚಂದ್ರಹಾಸ್ ಶೆಟ್ಟಿ, ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿವಾರ್, ಹಿಂದುಳಿದ ವರ್ಗಗಳ ಅಯೋಗದ ವಾಜಿ ಸದಸ್ಯ ಕೆ.ಟಿ.ಸುವರ್ಣ, ಉಳ್ಳಾಲ ಜವಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಕರೀಂ, ನಮೋದಯ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಪ್ರವೀಣ್ ಉಳ್ಳಾಲ ಬೈಲ್, ಬಿಲ್ಲವ ಸೇವಾ ಸವಾಜ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ್ ಕೊಲ್ಯ, ಬಿಲ್ಲವ ಸೇವಾ ಸವಾಜ ಅಧ್ಯಕ್ಷ ಹರೀಶ್ ಮುಂಡೋಳಿ, ಯುವವಾಹಿನಿ ಅಧ್ಯಕ್ಷೆ ಸುಧಾ ಸುರೇಶ್, ರೋಟರಿ ಸಮುದಾಯದಳ ಅಧ್ಯಕ್ಷ ಸುಂದರ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ವಿದ್ಯಾಧರ್ ಶೆಟ್ಟಿ ಪ್ರಾಸ್ತಾವಿಕ ವಾತನಾಡಿದರು. ಕುಸುವಾಕರ್ ಕುಂಪಲ ವಂದಿಸಿದರು. ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.

ದೀಪಾವಳಿ ಕೇವಲ ಹಿಂದುಗಳ ಹಬ್ಬವಲ್ಲ, ಇದು ಸರ್ವರ ಹಬ್ಬ. ಈ ಹಬ್ಬದ ಮೂಲಕ ಪ್ರತಿಯೊಬ್ಬರ ಮನಗಳು ಬೆಳಗಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಜೀವಿಸಿ ನಾಡು, ದೇಶದಲ್ಲಿ ಸೌಹಾರ್ದ ನೆಲೆಸುವಂತಾಗಲಿ. - ಫಾ.ಸಿಪ್ರಿಯನ್ ಪಿಂಟೋ, ಪ್ರಧಾನ ಧರ್ಮಗುರು, ಸಂತ ಸೆಬಾಸ್ಟಿಯನ್ ಚರ್ಚ್, ಪೆರ್ಮನ್ನೂರು https://www.vijayavani.net/someshwar-is-a-destination-for-tourism https://www.vijayavani.net/pratibha-karanji-at-jalsur-on-13th-and-14th

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net