ಜು.10 ರಂದು ಅಭಾಸಾಪದಿಂದ ವ್ಯಾಸ ಜಯಂತಿ ಆಚರಣೆ

ggggggg
Published on

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಸಮಿತಿ ಇದರ ವತಿಯಿಂದ ಶಾರದಾ ವಿದ್ಯಾಲಯ ಮತ್ತು
ಯಕ್ಷಾರಾಧನಾ ಕಲಾ ಕೇಂದ್ರದ ಸಹಯೋಗದಲ್ಲಿ ಜು.10 ರಂದು ಸಾಯಂಕಾಲ 6 ಕ್ಕೆ ನಗರದ ಕೊಡಿಯಾಲ್ಬೈಲ್ ನ ಶಾರದಾ
ವಿದ್ಯಾಲಯದಲ್ಲಿ ವ್ಯಾಸ ಜಯಂತಿ ಆಚರಣೆ ನಡೆಯಲಿದೆ.
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಿಕ್ಷಣ ತಜ್ಞ ಪ್ರೊ.ಪವನ್ ಕಿಣ್ಕೆರೆ ಅವರು ‘ಗುರುವಿನ ಮಹತ್ವ ಮತ್ತು ವ್ಯಾಸ ಭಾರತ ಓದಿನ ಪ್ರಸ್ತುತತೆ ‘ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಅಭಾಸಾಪ ದ.ಕ.ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಭಾಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ್ ಪ್ರಕಟಣೆಯಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net