ಲಾಕ್‌ಡೌನ್‌ಗೆ ಶನಿವಾರಸಂತೆ ಸಂಪೂರ್ಣ ಸ್ತಬ್ಧ

5ss1town bandh
Published on

ಶನಿವಾರಸಂತೆ: ಕೋವಿಡ್ ಸೋಂಕು ಹೆಚ್ಚಾಗುತಿರುವ ಹಿನ್ನೆಲೆಯಲ್ಲಿ ಸರ್ಕಾರ ಆ.5ರವರೆಗೆ ಪ್ರತಿ ಭಾನುವಾರ ಲಾಕ್‌ಡೌನ್‌ಗೆ ಆದೇಶ ಹೊರಡಿಸಿದ್ದು, ಅದರಂತೆ ಶನಿವಾರಸಂತೆ ವ್ಯಾಪಾರ ವಹಿವಾಟು ಇಲ್ಲದೆ ಸಂಪೂರ್ಣ ಸ್ತಬ್ಧವಾಗಿತ್ತು.

ಜನಜಂಗುಳಿಯಿಂದ ಕೂಡಿರುತ್ತಿದ್ದ ಪಟ್ಟಣದ ಕೆಆರ್‌ಸಿ ವೃತ್ತ ಭಣಗುಡುತ್ತಿತ್ತು. ಹೋಬಳಿ ವ್ಯಾಪ್ತಿಯ ಆಲೂರು- ಸಿದ್ದಾಪುರ ಸೇರಿ ಇತರ ಗ್ರಾಮಗಳಲ್ಲಿಯೂ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು. ಹೆದ್ದಾರಿಯಲ್ಲಿ ಯಾವುದೇ ವಾಹನಗಳ ಸಂಚಾರ ಇರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net