ಗ್ರಾಮಸಭೆಗೆ ಅಕಾರಿಗಳ ಗೈರು

2 (4)
ಗ್ರಾಮ ಸಬೆಗೆ ಆಗಮಿಸಿದ ಗ್ರಾಮಸ್ಥರು ಸಭೆಯಲ್ಲಿ ವಿವಿಧ ಇಲಾಖೆ ಅಕಾರಿಗಳು ಬಾರದಿರುವುದರಿಂದ ಗೈರು ಹಾಜರಾದ ಅಕಾರಿಗಳ ವಿರುದ್ಧ ಕ್ಕಾರ ಕೂಗಿದ ಗ್ರಾಮಸ್ಥರು ಸಭೆ ನಡೆಸದಂತೆ ಆಗ್ರಹಿಸಿ ಹೊರನಡೆದರು.
Published on

ಸುಂಟಿಕೊಪ್ಪ: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ 2024-25ರ ಸಾಲಿನ ಗ್ರಾಮ ಸಭೆಗೆ ಪ್ರಮುಖ ಇಲಾಖೆ ಅಕಾರಿಗಳು ಗೈರಾಗಿದ್ದರಿಂದ ಸಭೆಗೆ ಆಗಮಿಸಿದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಕಾರಿಗಳ ವಿರುದ್ಧ ಕ್ಕಾರ ಕೂಗಿ ಸಭೆ ಬಹಿಷ್ಕರಿಸಿ ಹೊರ ನಡೆದರು.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಾಕೂರು ಶಿರಂಗಾಲ ಕಾನ್‌ಬೈಲು ಸರ್ಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸಭೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ, ಉಪಾಧ್ಯಕ್ಷ ಸತೀಶ, ಸದಸ್ಯರಾದ ಕೊಳಂಬೆ ಸುಭಾಶ್, ಪ್ರೇಮಾ, ಬಿ.ಜಿ.ರಮೇಶ್, ಸೀತೆ, ರಾಧಾಮಣಿ, ಅರುಣಕುಮಾರಿ, ಪಂಚಾಯಿತಿ ಅಭಿವೃದ್ಧಿ ಅಕಾರಿ ಗೂಳಪ್ಪ ಕೂತಿನ ಅವರು ಸಮಯಕ್ಕೆ ಸರಿಯಾಗಿ ಆಗಮಿಸಿದ್ದರು. ಗ್ರಾಮಸ್ಥರು ಸಹ ಅಕ ಸಂಖ್ಯೆಯಲ್ಲಿ ಸೇರಿದ್ದರು.

ಪ್ರಮುಖ ಇಲಾಖೆಯಾದ ಕಂದಾಯ, ನೀರಾವರಿ. ಆಹಾರ ಮತ್ತು ನಾಗರಿಕ ಪೂರೈಕೆ, ಅರಣ್ಯ ಇಲಾಖೆ ಅಕಾರಿಗಳು ಸಭೆಗೆ ಗೈರಾಗಿದ್ದರಿಂದ ಗರಂ ಆದ ಗ್ರಾಮಸ್ಥರು ಸಭೆ ಮುಂದೂಡಬೇಕೆಂದು ಆಗ್ರಹಿಸಿದರು.

ಈ ವೇಳೆ ಅಧ್ಯಕ್ಷ ಜಗನ್ನಾಥ್ ಮಾತನಾಡಿ, ಸಭೆಗೆ ಅಕಾರಿಗಳು ಗೈರಾಗಿದ್ದಾರೆ. ಹಾಗಾಗಿ ಸಭೆಗೆ ಬಂದವರನ್ನು ವಾಪಸ್ ಕಳುಹಿಸದೆ ಅವರ ಅಹವಾಲುಗಳನ್ನು ಲಿಖಿತವಾಗಿ ಪಡೆದು, ಅದನ್ನು ಸಂಬಂಧಪಟ್ಟ ಇಲಾಖೆ ಅಕಾರಿಗಳಿಗೆ ಕಳುಹಿಸಿ ಅದನ್ನು ಅನುಷ್ಠಾನಗೊಳಿಸುವಂತೆ ತಿಳಿಸಲಾಗುವುದು ಎಂದರು.

ಇದಕ್ಕೆ ಗ್ರಾಮಸ್ಥರಾದ ರಾಮಯ್ಯ, ಅಂಬೆಕಲ್ ಚಂದ್ರು, ಶಾಂತಪ್ಪ ಪ್ರತಿಕ್ರಿಯಿಸಿ ಆಹಾರ ಇಲಾಖೆ, ಕುಡಿಯುವ ನೀರು ಸರಬರಾಜು, ಅರಣ್ಯ ಇಲಾಖೆ, ರಸ್ತೆ ಸಮಸ್ಯೆಗಳು ಇದ್ದು ಅಕಾರಿಗಳು ಇಲ್ಲದೆ ಸಭೆ ಸಡೆಸಿ ಪ್ರಯೋಜನವಿಲ್ಲ. ಸಭೆ ಮುಂದೂಡಿ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿ ಗೈರು ಹಾಜರಾದ ಅಕಾರಿಗಳ ವಿರುದ್ಧ ಕ್ಕಾರ ಕೂಗಿ ಸಭೆ ನಡೆಸದಂತೆ ಆಗ್ರಹಿಸಿ ಹೊರನಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net