ಅಧಿಕಾರಿಗಳ ಗೈರು ಖಂಡಿಸಿ ಪರಿಶಿಷ್ಟರ ಕುಂದು-ಕೊರತೆ ಸಭೆಗೆ ಬಹಿಷ್ಕಾರ

23 RON STROTY
ರೋಣ ಪಟ್ಟಣದ ಗುರು ಭವನದಲ್ಲಿ ಪೊಲೀಸ್ ಇಲಾಖೆಯಿಂದ ಶುಕ್ರವಾರ ಏರ್ಪಾಟಾಗಿದ್ದ ಎಸ್.ಸಿ, ಎಸ್.ಟಿ ವರ್ಗದವರ ಕುಂದು- ಕೊರತೆ ಸಭೆ ಬಹಿಷ್ಕರಿಸಿದ ಮುಖಂಡರು ಸಭಾಂಗಣದ ಹೊರಗೆ ಪ್ರತಿಭಟನೆ ನಡೆಸಿದರು.
Published on

ರೋಣ: ಪಟ್ಟಣದ ಗುರು ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೋಣ ಹಾಗೂ ಗಜೇಂದ್ರಗಡ ತಾಲೂಕು ಮಟ್ಟದ ಎಸ್.ಸಿ, ಎಸ್.ಟಿ ವರ್ಗದವರ ಕುಂದು- ಕೊರತೆ ಸಭೆಯಲ್ಲಿ ಬಹಳಷ್ಟು ಇಲಾಖೆ ಅಧಿಕಾರಿಗಳು ಹಾಜರಾಗದ ಕಾರಣ ದಲಿತ ಮುಖಂಡರು ಸಭೆ ಬಹಿಷ್ಕರಿಸಿ ಹೊರನಡೆದರು.

ಸಭಾಂಗಣದ ಹೊರಗೆ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿ ಎಸ್‌ಟಿ ಮೋರ್ಚಾದ ಮಾಜಿ ಅಧ್ಯಕ್ಷ ಬಸವಂತಪ್ಪ ತಳವಾರ ಮಾತನಾಡಿ, ಕುಂದು-ಕೊರತೆ ಆಲಿಸುವ ಸಭೆಯಲ್ಲಿ ಕೆಲವೇ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಬಹಳಷ್ಟು ಅಧಿಕಾರಿಗಳು ಸಭೆಗೆ ಬಾರದೆ ಬೇಜವಾಬ್ದಾರಿ ತೋರಿದ್ದಾರೆ. ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರಕಾಶ ಹೊಸಳ್ಳಿ, ಮಂಜುನಾಥ ಬುರಡಿ, ಶರಣಪ್ಪ ದೊಡ್ಡಮನಿ, ಶರಣು ಪೂಜಾರ, ಸೋಮು ನಾಗರಾಜ, ಹನುಮಂತ ಪೂಜಾರ, ಮೌನೇಶ ಹಾದಿಮನಿ, ಸಂಗಪ್ಪ ಹೊಸಮನಿ, ವೀರಪ್ಪ ತೆಗ್ಗಿನಮನಿ, ಮಲ್ಲು ಮಾದರ, ಸಂಜಯ್ ದೊಡ್ಡಮನಿ, ಹನುಮಂತ ನಾಗರಾಜ, ಬಸವರಾಜ ತಳವಾರ, ಡಿ.ಜಿ. ಕಟ್ಟಿಮನಿ, ವರುಣ ಕಟ್ಟಿಮನಿ, ಅಶೋಕ ಮಾದರ, ದುರಗಪ್ಪ ಹಿರೇಮನಿ, ಅಭಿಷೇಕ ಕೊಪ್ಪದ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net