ಅಧಿಕಾರಿಗಳು ಗೈರು-ಸಭೆ ಮುಂದೂಡಿಕೆ

sabhe
Published on

ಶಿಗ್ಗಾಂವಿ: ತಾಲೂಕಾಡಳಿತ ವತಿಯಿಂದ ಸ್ವಾತಂತ್ರೊೃೀತ್ಸವ ಆಚರಣೆ ಕುರಿತು ತಹಸೀಲ್ದಾರ್ ಕಾರ್ಯಾಲಯದಲ್ಲಿ ಬುಧವಾರ ಕರೆದಿದ್ದ ಪೂರ್ವಭಾವಿ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಬಾರದ ಕಾರಣ ಸಭೆ ಮುಂದೂಡುವಂತೆ ಕನ್ನಡ ಪರ ಮತ್ತು ರೈತ ಸಂಘಟನೆ ಸದಸ್ಯರು ಸಲಹೆ ನೀಡಿದರು.

ತಹಸೀಲ್ದಾರ್ ಸಂತೋಷ ಹಿರೇಮಠ ಅವರು ಸಭೆ ಕರೆದಿದ್ದರು. ಸಭೆಗೆ ಬೆರಳೆಣಿಕೆಯ ಜನಪ್ರತಿನಿಧಿಗಳು, ಕನ್ನಡ ಪರ, ರೈತ ಪರ ಸಂಘಟನೆಗಳ ಸದಸ್ಯರು ಹಾಜರಿದ್ದರು. ವಿವಿಧ ಇಲಾಖೆ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಸಭೆಯಲ್ಲಿ ಹಾಜರಿದ್ದ ಕೆಲವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸ್ವಾತಂತ್ರೃ ದಿನಾಚರಣೆಗೆ ನಿರಾಶಕ್ತಿ ತೋರಿಸುತ್ತಿರುವುದು ದೇಶಕ್ಕೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರಿಗೆ ಮಾಡಿದಂತಹ ಅವಮಾನವಾಗಿದೆ. ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವ ಮೂಲಕ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಸಂಘಟನೆಗಳ ಒತ್ತಾಯಕ್ಕೆ ಮಣಿದ ತಹಸೀಲ್ದಾರ್, ಆ. 10ರಂದು ಎಲ್ಲ ಇಲಾಖೆ ಅಧಿಕಾರಿಗಳು ತಪ್ಪದೆ ಹಾಜರಿರಬೇಕು. ಇಂದಿನ ಸಭೆಗೆ ಸೇರಿದ ಎಲ್ಲ ಸಂಘಟಕರು ಮತ್ತು ವಿವಿಧ ಸಮಾಜದ ಮುಖಂಡರು, ರಾಜಕಾರಣಿಗಳು ಸಭೆಗೆ ಹಾಜರಾಗಿ ಸಲಹೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಭುಲಿಂಗಪ್ಪ ಆಜೂರ, ಅಂಜುಮನ್ ಮುಖ್ಯಸ್ಥ ಮಜೀದ್ ಮಾಳಗಿಮನಿ, ಬಸವರಾಜ ಜೇಕಿನಕಟ್ಟಿ, ಸಂತೋಷ ಚಾಕಲಾಬ್ಬಿ, ಮುತ್ತಣ್ಣ ಗುಡಗೇರಿ, ಶಂಕರಗೌಡ ಪಾಟೀಲ, ಮಾನಪ್ಪ ಬಡಿಗೇರ, ಫಕೀರಪ್ಪ ಕುರಬರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net