ತಲೆಮರೆಸಿಕೊಂಡಿದ್ದವ ನ್ಯಾಯಾಂಗ ವಶಕ್ಕೆ

Crime Logo
Published on

ಭಟ್ಕಳ: ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ರಾಮಚಂದ್ರ ಸುಬ್ರಹ್ಮಣ್ಯ ನಾಯ್್ಕ ಎಂಬುವವನನ್ನು ಮುರ್ಡೆಶ್ವರ ಠಾಣೆ ಪೊಲೀಸರು ವಶಕ್ಕೆ ಪಡೆದು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವರದಕ್ಷಿಣೆ ಕಿರುಕುಳ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡ ಈತನ ಪತ್ತೆಗಾಗಿ ಮುರ್ಡೆಶ್ವರ ಪೊಲೀಸರು ಹೈದರಾಬಾದ್, ಬೆಂಗಳೂರು, ವಿಜಯಪುರ ಕಡೆಗಳಲ್ಲಿ ಮಾಹಿತಿ ಕಲೆ ಹಾಕಿದ್ದರು.

ವಿಜಯಪುರದ ವಿವೇಕನಗರದಲ್ಲಿ ಶನಿವಾರ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net