ಎಲ್ಲಕ್ಕಿಂತ ಜನರ ಆಶೀರ್ವಾದವೇ ದೊಡ್ಡದು

6RAVIG9-Web
ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ಶ್ರೀಮಸಣಾಯಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೂಮಿಪೂಜೆ ನೆರವೇರಿಸಿದರು. ಯುವರಾಜ ಕದಂ, ಶಿವಾಜಿ ಅತಿವಾಡಕರ್, ರೇಮಾಣಿ ತರಳೆ, ಶಿವಾಜಿ ರಾಕ್ಷೆ, ಶಂಕರ ತರಳೆ ಇತರರಿದ್ದರು.
Published on

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರು ಪ್ರೀತಿ, ವಿಶ್ವಾಸವಿಟ್ಟು ಆಶೀರ್ವದಿಸಿದ್ದಾರೆ. ಅವರ ಆಶೀರ್ವಾದ ಎಲ್ಲಕ್ಕಿಂತ ದೊಡ್ಡದು. ಅದಕ್ಕಿಂತ ಸುದೈವ ಬೇರೊಂದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ಶ್ರೀಮಸಣಾಯಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಪ್ರತಿ ಗ್ರಾಮದಲ್ಲಿ ದೇವಸ್ಥಾನ, ರಸ್ತೆ, ಶಾಲೆಗಳ ನಿರ್ಮಾಣ ಮತ್ತು ಕುಡಿಯುವ ನೀರಿನ ಸೌಲಭ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಇವೆಲ್ಲ ಜನರ ಬದುಕಿನಲ್ಲಿ ನೆಮ್ಮದಿ ನೀಡುವಂತಹವು. ಕನಿಷ್ಠ ಅವಶ್ಯಕತೆಗಳನ್ನೂ ಕಲ್ಪಿಸದಿದ್ದರೆ ಜನಪ್ರತಿನಿಧಿಗಳು ತಮ್ಮ ಕರ್ತವ್ಯದಿಂದ ಪಲಾಯನ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಯುವರಾಜ ಕದಂ, ಶಿವಾಜಿ ಅತಿವಾಡಕರ್, ರೇಮಾಣಿ ತರಳೆ, ಶಿವಾಜಿ ರಾಕ್ಷೆ, ಶಂಕರ ತರಳೆ, ರಾಜು ಕೊಚಾರಿ, ಅಮೋಲ್ ಬಾತ್ಕಂಡೆ, ಭರಮಾ ಮನ್ನೋಳಕರ್, ಅರುಣ ಬೆಳಗಾಂವಕರ್, ಸಂಜು ತರಳೆ, ದೇವಪ್ಪ ಮನ್ನೋಳಕರ್, ಶಿವಾಜಿ ಚೌಗುಲೆ, ಬಾಬು ತರಳೆ, ರಾಜು ತರಳೆ, ಅಶೋಕ ಯಳಗುಕರ್, ಪಿ.ಡಿ.ಕೋಲಕಾರ, ಪರುಶರಾಮ ತರಳೆ, ಮಾರುತಿ ಕಾಕತಕರ್ ಹಾಗೂ ಭಾಗ್ಯಲಕ್ಷ್ಮೀ ಕೋ-ಆಪ್ ಸೊಸೈಟಿ ಮತ್ತು ಯಶ್ ಕೋ-ಆಪ್ ಸೊಸೈಟಿ ಪದಾಧಿಕಾರಿಗಳು, ಸಂಚಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net