

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ 4 ದಿನಗಳ ಕೃಷಿ ಮೇಳ ಮಂಗಳವಾರ ಸಂಭ್ರಮದಿAದ ತೆರೆ ಕಂಡಿತು. ಕೃಷಿ ವಿಶ್ವವಿದ್ಯಾಲಯದ ಅಂಕಿ- ಅಂಶದ ಪ್ರಕಾರ ಕೊನೆಯ ದಿನ ಸುಮಾರು 4.70 ಲಕ್ಷ ಜನ ಹಾಗೂ ನಾಲ್ಕೂ ದಿನ ಸೇರಿ 21.28 ಲಕ್ಷ ರೈತರು, ವಿಸ್ತರಣಾ ಕಾರ್ಯಕರ್ತರು ಹಾಗೂ ಇಲಾಖೆಯ ಅಽಕಾರಿಗಳು ಪಾಲ್ಗೊಂಡಿದ್ದರು.
ಸAಜೆ ನಡೆದ ಸಮಾರೋಪ ಸಮಾರಂಭದ ಅತಿಥಿಯಾಗಿ ಕೃಷಿ ವಿವಿ ವಿಶ್ರಾಂತ ವಿಶ್ರಾಂತ ಕುಲಪತಿ ಡಾ. ಜೆ.ಎಚ್. ಕುಲಕರ್ಣಿ ಪಾಲ್ಗೊಂಡಿದ್ದರು. ರೈತರು ಕೃಷಿ ತ್ಯಾಜ್ಯಗಳನ್ನು ಗೊಬ್ಬರವಾಗಿ ಮರುಬಳಕೆ ಮಾಡುವುದು ಮತ್ತು ಅದರ ಪ್ರಯೋಜನಗಳನ್ನು ವಿವರಿಸಿದರು. ಹವಾಮಾನ ವೈಪರೀತ್ಯಗಳನ್ನು ನಿರ್ವಹಿಸಲು ಕೃಷಿಯಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಇದೇವೇಳೆ `ಕೃಷಿ ಇಂಜಿನಿಯರಿAಗ್ ಸುಧಾರಿತ ಬೇಸಾಯ ಕ್ರಮಗಳು' ಪುಸ್ತಕ ಬಿಡುಗಡೆ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಪಿ.ಎಲ್. ಪಾಟೀಲ ಮಾತನಾಡಿ, ರೈತರು ಇಲ್ಲಿ ಖರೀದಿಸಿದ ಬಿತ್ತನೆ ಬೀಜಗಳನ್ನು 2- 3 ವರ್ಷ ಬಳಸಿಕೊಳ್ಳಬೇಕು. ಬೇರೆ ರೈತರಿಗೂ ನೀಡಬೇಕು ಎಂದರು.
ಪ್ರಗತಿಪರ ರೈತರಾದ ಸಂಜೀವ ಹೊಂಗಲ ಮತ್ತು ಮಧುಕೇಶ್ವರ ಹೆಗಡೆ ಅನಿಸಿಕೆ ಹಂಚಿಕೊAಡರು. ಡಾ. ಕೆ.ಸಿ. ಶಶಿಧರ, ಆಡಳಿತ ಮಂಡಳಿ ಸದಸ್ಯರು ಮತ್ತು ಅಽಕಾರಿಗಳು ಉಪಸ್ಥಿತರಿದ್ದರು. ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್. ಅಂಗಡಿ ಸ್ವಾಗತಿಸಿದರು. ಸಂಶೋಧನಾ ನಿರ್ದೇಶಕ ಡಾ. ಬಿ.ಡಿ. ಬಿರಾದಾರ ವಂದಿಸಿದರು.