

ರಾಯಚೂರು: ವಾಹನ ಚಾಲಕರಿಗೆ ಮಾರಕವಾಗಿರುವ ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ರಸ್ತೆ ಅಪಘಾತ ನಿಯಂತ್ರಣ ಕಾಯ್ದೆಯನ್ನು ಕೈಬಿಡುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಖಾಸಗಿ ವಾಹನ ಮತ್ತು ಟ್ಯಾಕ್ಸಿ ಚಾಲಕರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಕಾಯ್ದೆಯಲ್ಲಿ ಚಾಲಕರನ್ನು ಗುರಿಯಾಗಿಟ್ಟುಕೊಂಡು ಶಿಕ್ಷೆ ವಿಸುವಂತ ಅಂಶಗಳಿದ್ದು, ಇದರಿಂದ ಚಾಲಕರು ವಾಹನ ಚಲಾಯಿಸಲು ಸಾಧ್ಯವಾಗದಂತಹ ಸ್ಥಿತಿ ಎದುರಾಗಲಿದೆ ಎಂದು ದೂರಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂಸತ್‌ನಲ್ಲಿ ಮಂಡಿಸಿರುವ ಹೊಸ ಕಾಯ್ದೆಯಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳಿಗೆ ಚಾಲಕರನ್ನು ಹೊಣೆ ಮಾಡುತ್ತಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಹೆದ್ದಾರಿಗಳಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬದಲು ಚಾಲಕರನ್ನು ಹೊಣೆ ಮಾಡಿದರೆ ವೃತ್ತಿ ಜೀವನ ನಡೆಸಲು ಅಸಾಧ್ಯವಾಗುತ್ತದೆ.
ಹೆದ್ದಾರಿಗಳಲ್ಲಿ ಸಿಸಿ ಟಿವಿ ಅಳವಡಿಕೆ, ಅಪಘಾತ ಸ್ಥಳ, ತಿರುವು ಸೇರಿದಂತೆ ಯಾವುದೇ ಎಚ್ಚರಿಕೆ ನಾಮಫಲಕ ಅಳವಡಿಸದೇ ಇರುವುದು ಸೇರಿದಂತೆ ಅನೇಕ ರಸ್ತೆ ಸುರಕ್ಷತಾ ವ್ಯವಸ್ಥೆ ಸೂಕ್ತವಾಗಿರುವಿದಿಲ್ಲ. ಅಪಘಾತಕ್ಕೆ ಕೇವಲ ಚಾಲಕರನ್ನು ಹೊಣೆ ಮಾಡಿ 10 ವರ್ಷ ಶಿಕ್ಷೆ ಗುರಿ ಮಾಡುವುದು ಅವೈಜ್ಞಾನಿಕ ಕ್ರಮವಾಗಲಿದೆ. ಕಾರಣ ಹೊಸ ಕಾಯ್ದೆ ಜಾರಿಯನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಜಾರ್ ಸಾದಿಕ್, ಪ್ರಧಾನ ಕಾರ್ಯದರ್ಶಿ ಮಹ್ಮದ್ ನಿಸಾರ್ ಅಹ್ಮದ್, ಪದಾಕಾರಿಗಳಾದ ಹಾಜಿ, ಶಬ್ಬೀರ್, ಮಹ್ಮದ್ ಶಫಿ, ನರಸಿಂಹಲು ಪಾಲ್ಗೊಂಡಿದ್ದರು.