ಹಿಟ್ ಅಂಡ್ ರನ್ ಕೇಸ್‌ನ ಶಿಕ್ಷೆ ರದ್ದುಗೊಳಿಸಿ

17KDR1 (1)
ವಾಹನಗಳ ಚಾಲಕರಿಗೆ ಕಠಿಣ ಶಿಕ್ಷೆ ವಿಧಿಸುವ ನಿಯಮ ಜಾರಿ ವಿರೋಧಿಸಿ ಕಡೂರು ತಾಲೂಕು ಕಚೇರಿ ಆವರಣದಲ್ಲಿ ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು. ಶ್ರೀಕಾಂತ್, ಮೈಲಾರಪ್ಪ, ನವೀನ್, ರಾಜು, ಚಂದ್ರು ಇದ್ದರು.
Published on

ಕಡೂರು: ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ವಾಹನಗಳ ಚಾಲಕರಿಗೆ ಕಠಿಣ ಶಿಕ್ಷೆ ವಿಧಿಸುವ ನಿಯಮ ಜಾರಿ ವಿರೋಧಿಸಿ ಪಟ್ಟಣದಲ್ಲಿ ಕರುನಾಡ ಸಾರಥಿಗಳ ಸೈನ್ಯ, ಟ್ರೇಡ್ ಯೂನಿಯನ್ ಸಂಘಟನೆ ಸದಸ್ಯರು ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಹರೀಶ್ ಮಾತನಾಡಿ, ಕೇಂದ್ರ ಸರ್ಕಾರದ ಇತ್ತೀಚೆಗೆ ವಾಹನ ಚಾಲಕರಿಗೆ ಹೊಸ ಕಾನೂನನ್ನು ಜಾರಿಗೆ ತಂದಿದ್ದು, ಹಿಟ್ ಅಂಡ್ ರನ್ ಕೇಸ್‌ನಲ್ಲಿ ವಿಧಿಸಿರುವ ಶಿಕ್ಷೆ ರದ್ದುಗೊಳಿಸಬೇಕಿದೆ. ಅಪಘಾತವೆಸಗಿದ ಚಾಲಕರಿಗೆ ಕೇಂದ್ರ ಸರ್ಕಾರದ ಹೊಸ ಕಾನೂನಿನಲ್ಲಿ 10 ವರ್ಷ ಜೈಲು ಮತ್ತು 7ಲಕ್ಷ ರೂ. ದಂಡ ವಿಧಿಸಿರುವ ಕಾನೂನನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಚಾಲಕ ವೃತ್ತಿ ನಂಬಿ ಬದುಕುತ್ತಿರುವ ಬಹುತೇಕರು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮಾಲೀಕರು ನೀಡುವ ವೇತನದಲ್ಲೇ ಜೀವನ ನಿರ್ವಹಣೆ ಕಷ್ಟಕರವಾಗಿದೆ. ನಮ್ಮನ್ನು ನಂಬಿರುವ ಕುಟುಂಬಸ್ಥರಿಗೆ ತೊಂದರೆಯಾಗುತ್ತಿದ್ದು, ಇದರಿಂದ ಕೇಂದ್ರ ಸರ್ಕಾರದ ಜಾರಿಗೊಳಿಸಿರುವ ಮಾರಕ ಕಾನೂನನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net