

ಸಿರವಾರ: ದೈನಂದಿನ ಜೀವನದಲ್ಲಿ ವಿಜ್ಞಾನದ ಅಗತ್ಯ ತುಂಬಾ ಇದೆ ಎಂದು ವಿಜ್ಞಾನ ಶಿಕ್ಷಕ ಜಿ.ಶರಣಬಸಪ್ಪ ಹೇಳಿದರು.
ಪಟ್ಟಣದಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಿಜ್ಞಾನ ದಿನದ ಕಾರ್ಯಕ್ರಮದಲ್ಲಿ ಸರ್ ಸಿ.ವಿ.ರಾಮನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶನಿವಾರ ಮಾತನಾಡಿದರು. ವಿಜ್ಞಾನದಿಂದಾಗಿಯೇ ಆಧುನಿಕತೆ ಇಷ್ಟೊಂದು ಅಗಾಧವಾಗಿ ಬೆಳೆದಿದೆ. ವಿದ್ಯಾರ್ತಿಗಳು ಕೌಶಲದೊಂದಿಗೆ ಪ್ರಶ್ನೆ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕೆಂದರು.
ಸಿ.ವಿ.ರಾಮನ್ ಸಾಧನೆ, ರಾಮನ್ ಎಫೆಕ್ಟ್, ನೊಬೆಲ್ ಪಾರಿತೋಷಕ ಲಭಿಸಿದ್ದು ಹಾಗೂ ವಿಜ್ಞಾನ ದಿನಾಚರಣೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಶಿಕ್ಷಕ ಶರಣಬಸಪ್ಪ ಮಾಹಿತಿ ನೀಡಿದರು. ವಿಜ್ಞಾನ ಚಿತ್ರ ರಚನೆ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ಏಳನೇ ತರಗತಿಯ ಹರ್ಷಿತಾ ಪ್ರಥಮ, ಆಕಾಶ ದ್ವಿತೀಯ ಸ್ಥಾನ ಪಡೆದರು. ಪೌಢಶಾಲೆ ವಿಭಾಗದಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿನಿ ರೇಣುಕಾ ಪ್ರಥಮ, ಎಂಟನೇ ತರಗತಿ ವಿದ್ಯಾರ್ಥಿನಿ ಇಂದು ದ್ವಿತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ಉಮಾವತಿ, ನೀಲಮ್ಮ, ಪಿ.ಚಂದ್ರಕಲಾ, ತಿಪ್ಪಣ್ಣ ರಾಠೋಡ್, ಶರಣಬಸವ, ಆನಂದ ಜಿ., ಪ್ರದೀಪ ಕುಮಾರ ಇತರರಿದ್ದರು.