

ಹುಬ್ಬಳ್ಳಿ : ಹುಬ್ಬಳ್ಳಿ ಆಯುರ್ವೆದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಸಕ್ತ ಸಾಲಿನ ‘ಅಭ್ಯುದಯ’ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭ ಶನಿವಾರ ನೆರವೇರಿತು.
ಉದ್ಘಾಟಿಸಿ ಮಾತನಾಡಿದ ಮಹಾಪೌರ ರಾಮಪ್ಪ ಬಡಿಗೇರ, ವೈದ್ಯಕೀಯ ವೃತ್ತಿಯಲ್ಲಿರುವವರು ಸಾಮಾಜಿಕ ಕಳಕಳಿ ಬೆಳಸಿಕೊಳ್ಳಬೇಕು. ವೃತ್ತಿಯ ಜತೆಗೆ ಸಾಮಾಜಿಕ ಸೇವೆಯನ್ನೂ ಮಾಡಬೇಕು ಎಂದು ತಿಳಿಸಿದರು.
ಅತಿಥಿಯಾಗಿದ್ದ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಸಿಂಡಿಕೇಟ್ ಸದಸ್ಯ ಡಾ. ಎಂ.ಜೆ. ಜೀವನ್ನವರ ಮಾತನಾಡಿ, ವಿದ್ಯಾರ್ಥಿ ಸಂಘದ ಮೌಲ್ಯಗಳನ್ನು ಹೇಳಿದರು.
ಮಹಾವಿದ್ಯಾಲಯದ ಆಯುರ್ವೆದ ಸೇವಾ ಸಮಿತಿ ಸಭಾಪತಿ ಗೋವಿಂದ ಜೋಶಿ ಮಾತನಾಡಿದರು.
ಅಭ್ಯುದಯ ವಿದ್ಯಾರ್ಥಿ ಸಂಘದ ಚೇರ್ಮನ್ ಡಾ. ಅನಿತಾ ಹಲಗತ್ತಿ, ವಿದ್ಯಾರ್ಥಿ ಸಂಘದ ಕಾರ್ಯ ವೈಖರಿಯನ್ನು, ಉದ್ದೇಶಗಳು ಮತ್ತು ಭವಿಷ್ಯದ ತಿರ್ವನಗಳನ್ನು ವಿವರಿಸಿದರು. ಡೀನ್ ಡಾ. ಜೆ.ಆರ್. ಜೋಶಿ, ಪ್ರಧಾನ ಕಾರ್ಯದರ್ಶಿ ಅಂಜಲಿ ನಾಯಕ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್. ಅಧ್ಯಕ್ಷತೆ ವಹಿಸಿದ್ದರು. ಡಾ ಸವಿತಾ ಸಜ್ಜನ ಸ್ವಾಗತಿಸಿದರು. ಡಾ. ಚಂದ್ರಭೂಷಣ ಸಿನ್ಹಾ ವಂದಿಸಿದರು.