ವಿಕಸಿತ ಕೃಷಿ ಸಂಕಲ್ಪ ಅಭಿಯಾನ

abhiyana
Published on

ಮಡಿಕೇರಿ:

ಈ ವರ್ಷ ಉತ್ತಮ ಮುಂಗಾರಿನ ಸೂಚನೆ ಸಿಗುತ್ತಿದ್ದಂತೆಯೇ ರೈತರ ಮುಖದಲ್ಲಿ ಸಂತಸ ಅರಳಿದೆ. ಈ ಮಧ್ಯೆ ಸರ್ಕಾರಗಳೂ ಅನ್ನದಾತರ ಬೆನ್ನಿಗೆ ನಿಂತಿದ್ದು ಹೆಚ್ಚು ಉತ್ಪಾದನೆ ಮೂಲಕ ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದೆ. ಈ ಮಧ್ಯೆ ಕೃಷಿಕರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಹೆಜ್ಜೆಗಳನ್ನು ಇಡುತ್ತಿರುವ ಕೇಂದ್ರ ಸರ್ಕಾರ ಈ ವರ್ಷ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ' ಎನ್ನುವ ವಿನೂತನ ಕಾರ್ಯಕ್ರಮ ರೂಪಿಸಿದ್ದು, ಗುರುವಾರ (ಮೇ 29) ಇದಕ್ಕೆ ಕೊಡಗಿನಲ್ಲೂ ಚಾಲನೆ ಸಿಗಲಿದೆ.

ಕÊಷಿ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆಗಳಲ್ಲಿ ಹೊಸ ಹೊಸ ಅನ್ವೇಷಣೆಗಳು, ವ್ಯವಸಾಯಕ್ಕೆ ಸಂಬAಧಿಸಿದ ತಂತ್ರಜ್ಞಾನಗಳು ರೂಪುಗೊಳ್ಳುತ್ತಲೇ ಇರುತ್ತದೆ. ಸಣ್ಣ ರೈತರಿಗೂ ಇದರ ಉಪಯೋಗ ಸುಲಭವಾಗಿ ಸಿಗುವಂತಾದರೆ ಕÊಷಿಕರೂ ಉದ್ಯಮಿಗಳಾಗುವುದು ಕಷ್ಟವೇನಲ್ಲ. ಇದಕ್ಕೂ ಮೊದಲು ಇಂತಹ ಕೇಂದ್ರಗಳು ಮತ್ತು ಅನ್ನದಾತರ ಮಧ್ಯೆ ನಿರ್ಮಾಣವಾಗಿರುವ ಅಗೋಚರ ಕಂದಕ ಮುಚ್ಚುವ ಕೆಲಸ ಆಗಬೇಕಿದೆ ಎನ್ನುವುದು ಸಾಮಾನ್ಯವಾಗಿ ಕೇಳಿ ಬರುವ ಮಾತು.

ಈ ನಿಟ್ಟಿನಲ್ಲಿ ಗುರುವಾರದಿಂದ (ಮೇ 29) ಆರಂಭವಾಗುತ್ತಿರುವ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ' ಹೊಸ ನಿರೀಕ್ಷೆ ಮೂಡಿಸಿದೆ. ಕೃಷಿ ಸಂಶೋಧನೆ ಮತ್ತು ರೈತ ಸಮುದಾಯದ ನಡುವಿನ ಅಂತರ ಕಡಿಮೆ ಮಾಡುವ ಪ್ರಮುಖ ಉದ್ದೇಶದಿಂದ ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ ಹಾಗೂ ಅದರ ವಿವಿಧ ಅಂಗ ಸಂಸ್ಥೆಗಳ ಸಂಶೋಧನ ಕೇಂದ್ರಗಳು, ದೇಶದ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಇತರ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ದೇಶಾದ್ಯಂತ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ' ನಡೆಸಲಾಗುತ್ತಿದೆ. ಈ ಮುಂಗಾರು ಹಂಗಾಮಿನಲ್ಲಿ ಕೃಷಿಕರಿಗೆ ತಾಂತ್ರಿಕತೆಗಳು ಲಭ್ಯವಾಗುವಂತೆಯೂ ಮಾಡುವ ಈ ಅಭಿಯಾನ ಜೂನ್ 12ರ ತನಕ ಕೊಡಗಿನಲ್ಲಿ ಕೂಡ ಆಯೋಜಿಸಲಾಗಿದೆ.

ಕೃಷಿ ವಿಜ್ಞಾನ ಕೇಂದ್ರ ಮತ್ತು ಇತರ ಸಂಶೋಧನಾ ಕೇಂದ್ರಗಳ ವಿಜ್ಞಾನಿಗಳು, ಇಲಾಖೆಯ ಅಧಿಕಾರಿಗಳು ರೈತರ ಬಳಿ ತೆರಳಿ, ಜಿಲ್ಲೆಯ ಎಲ್ಲಾ ರೈತರಿಗೆ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಹಿತಿ ನೀಡುವುದು ಈ ಅಭಿಯಾನದ ಗುರಿಯಾಗಿದೆ. ಅಲ್ಲಲ್ಲಿ ರೈತರನ್ನು ಒಗ್ಗೂಡಿಸಿ ನೂತನ ತಂತ್ರಜ್ಞಾನಗಳು, ಹೊಸ ತಳಿಗಳ ಹಾಗೂ ಬೀಜಗಳ ಮಾಹಿತಿ, ನಿಖರವಾದ ಹವಾಮಾನ ಮಾಹಿತಿ ಮತ್ತು ಸರ್ಕಾರದ ವಿವಿಧ ಲಾಭದಾಯಕ ಯೋಜನೆಗಳು, ಕೃಷಿಯಲ್ಲಿ ಹೆಚ್ಚು ಲಾಭ ಪಡೆಯುವುದು ಹೇಗೆ ? ಹೀಗೆ ವಿವಿಧ ಮಾಹಿತಿಗಳನ್ನು ಈ ಅಭಿಯಾನದ ಸಂದರ್ಭದಲ್ಲಿ ಕೊಡಲಾಗುವುದು.

ಅಭಿಯಾನದ ವೇಳೆ ರೈತರು ಕೊಡುವ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ಅವರ ಹೊಸ ಆವಿಷ್ಕಾರಗಳನ್ನು ಸಂಶೋಧನೆ ಮತ್ತು ಪ್ರಸಾರ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ. ಬೆಳೆ, ಮಣ್ಣು ಹಾಗೂ ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ತಜ್ಞರಿಂದ ಸಲಹೆಗಳನ್ನು ನೀಡಲಾಗುತ್ತದೆ ಜತೆಗೆ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯುವ ವಿಧಾನಗಳ ಕುರಿತು ಸಂಪೂರ್ಣ ಮಾಹಿತಿ ಅಭಿಯಾನದಲ್ಲಿ ಪಾಲ್ಗೊಳ್ಳುವ ರೈತರಿಗೆ ನೀಡಲಾಗುತ್ತದೆ.

ಜಿಲ್ಲೆಯಲ್ಲಿ ಮಡಿಕೇರಿಯಲ್ಲಿ ಕÊಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಗೋಣಿಕೊಪ್ಪಲುವಿನಲ್ಲಿ ಕÊಷಿ ವಿಜ್ಞಾನ ಕೇಂದ್ರ, ಚೆಟ್ಟಳ್ಳಿಯಲ್ಲಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಕಾಫಿ ಸಂಶೋಧನಾ ಕೇಂದ್ರ, ಅಪ್ಪಂಗಳಲ್ಲಿ ಸಾಂಬಾರ ಬೆಳೆಗಳ ಸಂಶೋಧನಾ ಕೇಂದ್ರ, ಕೂಡಿಗೆಯ ಜಿಲ್ಲಾ ಕÊಷಿ ತರಬೇತಿ ಕೇಂದ್ರ... ಹೀಗೆ ಜಿಲ್ಲೆಯಲ್ಲಿ ತೋಟಗಾರಿಕೆ ಮತ್ತು ಕÊಷಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ವಿವಿಧ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಸಂಪೂರ್ಣ ಪ್ರಯೋಜನ ಕÊಷಿಕರಿಗೆ ಸಿಗುತ್ತಿಲ್ಲ ಎನ್ನುವ ಆರೋಪಕ್ಕೆ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ದ ಮೂಲಕ ಉತ್ತರ ಸಿಗಲಿದೆ.

ಮೇ 29ಕ್ಕೆ ಗೋಣಿಕೊಪ್ಪಲಿನಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಆರಂಭವಾಗಲಿದ್ದು, ನಂತರ ವಿರಾಜಪೇಟೆ, ಹುದಿಕೇರಿ, ನಾಪೋಕ್ಲು, ಕೊಡ್ಲಿಪೇಟೆ, ಅಮ್ಮತ್ತಿ, ಭಾಗಮಂಡಲ, ಶ್ರೀಮಂಗಲ, ಕುಶಾಲನಗರ, ಮಡಿಕೇರಿ, ಬಾಳೆಲೆ, ಸುಂಟಿಕೊಪ್ಪ, ಸಂಪಾಜೆ, ಶಾಂತಳ್ಳಿ, ಸೋಮವಾರಪೇಟೆ, ಶನಿವಾರಸಂತೆ, ಮಾಲ್ದಾರೆ, ಕುಟ್ಟ, ಅವರೇಗುಂದ, ತೋಳೂರುಶೆಟ್ಟಳ್ಳಿ, ಚೆನ್ನಯ್ಯನಕೋಟೆ, ಚೌಡ್ಲು, ಗೂಡ್ಲೂರು, ಕೊಡಗರಹಳ್ಳಿ, ಹೆಬ್ಬಾಲೆ, ಅರೆಯೂರುವಿನಲ್ಲಿ ನಡೆಸಲು ಯೋಜಿಸಲಾಗಿದೆ. ಆಯಾಯ ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ತಂಡ ಭೇಟಿ ನೀಡುವ ಬಗ್ಗೆ ಅಲ್ಲಿನ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ.

ಸ್ಥಳೀಯ ಹವಾಮಾನ, ಮಣ್ಣಿನ ಗುಣ, ಬೆಳೆ ಪದ್ಧತಿ, ರೋಗ ಬಾಧೆ, ಬದಲಾಗುತ್ತಿರುವ ಜೀವನ ಶೈಲಿ, ಕಾರ್ಮಿಕರ ಕೊರತೆ, ಮಾರುಕಟ್ಟೆಯಲ್ಲಿನ ಬೇಡಿಕೆ ಅಂಶ ಮತ್ತಿತರ ವಿಷಯಗಳ ಆಧಾರದಲ್ಲಿ ಕÊಷಿ ಮತ್ತು ತೋಟಗಾರಿಕೆಗೆ ಸಂಬAಧಿಸಿದ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ನಿರಂತರ ಸಂಶೋಧನೆಗಳನ್ನು ನಡೆಸುತ್ತಿರುತ್ತಾರೆ. ಹೊಸ ತಳಿಗಳು, ನೂತನ ತಂತ್ರಜ್ಞಾನಗಳ ಅನ್ವೇಷಣೆಯೂ ಆಗುತ್ತಿರುತ್ತದೆ. ಇವುಗಳ ಪೈಕಿ ಹೆಚ್ಚಿನವು ವಿಜ್ಞಾನಿಗಳ ಪ್ರಬಂಧ ಮಂಡನೆಗೆ, ಪದೋನ್ನತಿಗೆ ಸೀಮಿತವಾಗುತ್ತಿದೆಯೇ ಹೊರತು ರೈತರ ಜಮೀನಿಗೆ ಬರುತ್ತಿಲ್ಲ ಎನ್ನುವ ಕೊರಗಿದೆ.

ಸಂಶೋಧನಾ ಸಂಸ್ಥೆಗಳು ಸಾಮಾನ್ಯವಾಗಿ ವರ್ಷದಲ್ಲಿ 2-3 ಬಾರಿ ಸ್ಥಳೀಯವಾಗಿ ಕ್ಷೇತ್ರೋತ್ಸವ, ವಿಜ್ಞಾನಿಗಳ ಜೊತೆ ಸಂವಾದ, ಕÊಷಿ ಮೇಳ, ವಿಚಾರ ಸಂಕಿರಣ ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ತಮ್ಮಲ್ಲಿ ಆಗಿರುವ ಬೆಳವಣಿಗೆಗಳನ್ನು ರೈತರಿಗೆ ತಲುಪಿಸುವ ಪ್ರಯತ್ನ ನಡೆಸುತ್ತಿರುತ್ತದೆ. ಆದರೆ ಇದರಿಂದ ನಿರೀಕ್ಷಿತ ಪ್ರಯೋಜನ ಆಗುತ್ತಿಲ್ಲ. ಇಂತಹ ಬಹುತೇಕ ಕಾರ್ಯಕ್ರಮಗಳಲ್ಲಿ ರೈತರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇರುತ್ತದೆ. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಕÊಷಿಯೂ ಉದ್ಯಮ ಆಗಬೇಕು. ಕÊಷಿಕನಿಗೆ ಉದ್ಯಮಿಯ ಸ್ಥಾನಮಾನ ಸಿಗಬೇಕು ಎನ್ನುವ ಮಾತುಗಳೂ ಆಗಾಗ್ಗೆ ಕೇಳಿ ಬರುತ್ತಿರುತ್ತದೆ. ಇವು ಕಾರ್ಯರೂಪಕ್ಕೆ ಬರಬೇಕಿದ್ದರೆ ವ್ಯವಸಾಯದಲ್ಲಿ ಉತ್ಪಾದನಾ ವೆಚ್ಚ ಇಳಿಯಬೇಕು. ಆಧುನಿಕ ತಂತ್ರಜ್ಞಾನದ ಬಳಕೆ ಜಾಸ್ತಿಯಾಗಬೇಕು. ಇಳುವರಿ ಹೆಚ್ಚಬೇಕು ಎನ್ನುತ್ತಾರೆ ತಜ್ಞರು. ಈ ನಿಟ್ಟಿನಲ್ಲಿ ಕÊಷಿ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆಗಳ ಅನ್ವೇಷಣೆಗಳು, ಹೊಸ ತಂತ್ರಜ್ಞಾನಗಳು ಸಣ್ಣ ರೈತರಿಗೂ ತಲುಪುವಂತಾಗಬೇಕು. ಹಾಗಾಗಿ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಗಳಿವೆ.

ಮುಂಗಾರು ಹಂಗಾಮಿನಲ್ಲಿ ಕೃಷಿಕರಿಗೆ ತಾಂತ್ರಿಕತೆಗಳು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಯೋಜಿಸಲಾಗಿದೆ. ಈ ಅಭಿಯಾನದ ತಂಡ ಆಯಾಯ ಗ್ರಾಮ ಅಥವಾ ಹೋಬಳಿಗೆ ಬಂದಾಗ ಈ ಕಾರ್ಯಕ್ರಮದಲ್ಲಿ ರೈತರು ಭಾಗವಹಿಸಬಹುದು. ಈ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊAಡು ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡು ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಬಹುದು.

ಡಾ. ವೀರೇಂದ್ರಕುಮಾರ್, ಸಸ್ಯ ಸಂರಕ್ಷಣಾ ತಜ್ಞ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net