ಸಾಹಿತ್ಯ ಪ್ರಕಾರಗಳ ಮಹತ್ವ ಅರಿವು : ಡಾ.ಜಯಪ್ರಕಾಶ ನಾರಾಯಣ ಅಭಿಪ್ರಾಯ

New Project (11)
Published on

ಮುಳ್ಳೇರಿಯ: ಗದ್ಯ, ಪದ್ಯ ಮೊದಲಾದ ಸಾಹಿತ್ಯ ಪ್ರಕಾರಗಳ ಮಹತ್ವದ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶವು ವಿದ್ಯಾರ್ಥಿಗಳಿಗೆ ಅಭಿಯಾನದಿಂದ ದೊರಕಿದೆ ಎಂದು ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಹೇಳಿದರು.

ದೇಲಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಅಭಿಯಾನದಲ್ಲಿ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಹಾಗೂ ಘಟಕದ ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಿ ಮಾತನಾಡಿದರು.

ಹಿರಿಯ ಯಕ್ಷಗಾನ ಗುರುಗಳಾದ ವಿಶ್ವ ವಿನೋದ ಬನಾರಿ ಉದ್ಘಾಟಿಸಿದರು. ಡಾ.ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಸುಮಂಗಲಾ ಸಿ.ಎಚ್., ಎಸ್‌ಎಂಸಿ ಅಧ್ಯಕ್ಷ ಉದಯ ಕುಮಾರ ದೇಲಂಪಾಡಿ, ಕಸಾಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಮೊದಲಾದವರಿದ್ದರು. ಚುಟುಕು ರಚನಾ ಕಮ್ಮಟದಲ್ಲಿ ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಹಾಗೂ ವ್ಯಂಗ್ಯಚಿತ್ರ ರಚನಾ ಕಮ್ಮಟದಲ್ಲಿ ಸಾಹಿತಿ ವಿರಾಜ್ ಅಡೂರು ಭಾಗವಹಿಸಿದ್ದರು.

ಸಮಾರೋಪ ಸಮಾರಂಭ

ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳ ಚಟುವಟಿಕೆಗಳ ಹಸ್ತಪ್ರತಿ ಸಂಕಲನವಾದ ‘ಕಾವ್ಯ ಕಾರಂಜಿ ’ ಹಾಗೂ ‘ವ್ಯಂಗ್ಯಾಂತರಂಗ’ ಕೃತಿ ಬಿಡುಗಡೆ ಮಾಡಲಾಯಿತು. ಶಿಕ್ಷಕಿಯರಾದ ಜಲಜಾಕ್ಷಿ, ಶೈಲಜಾ, ಪ್ರತಿಭಾ, ಆಶಾಲತಾ ಸಹಕರಿಸಿದರು. ಶಿಕ್ಷಕ ಸುನಿಲ್ ಕುಮಾರ ಮಯ್ಯಳ ಸ್ವಾಗತಿಸಿದರು. ಸಂಧ್ಯಾರಾಣಿ ವಂದಿಸಿದರು. ಚುಟುಕು ಮತ್ತು ವ್ಯಂಗ್ಯಚಿತ್ರ ಸ್ಪರ್ಧಾ ವಿಜೇತರಿಗೆ ಪುಸ್ತಕ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net