ಬೆಟ್ಟಂಪಾಡಿಯಲ್ಲಿ ಶಿಕ್ಷಕರಿಗೆ ‘ಅಭಿವಂದನಮ್’

PTR_7 JUN_5
Published on

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಬೆಟ್ಟಂಪಾಡಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಸಾಧನೆ ಮಾಡಿದ ಹಿನ್ನಲೆಯಲ್ಲಿ ಅಭಿವಂದನಮ್ ಕಾರ್ಯಕ್ರಮ ಸಂಸ್ಥೆಯ ಕೇಶವ ದರ್ಶಿನಿ ಸಭಾಂಗಣದಲ್ಲಿ ನಡೆಯಿತು.


ಬೆಟ್ಟಂಪಾಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ವರದರಾಜ ಚಂದ್ರಗಿರಿ ಅವರು ಅಧ್ಯಾಪಕರನ್ನು ಗೌರವಿಸಿದರು. ಅಧ್ಯಾಪಕರಲ್ಲಿ ದೇವರನ್ನು ಕಾಣುವ ನಮ್ಮ ಸಂಪ್ರದಾಯದಂತೆ ಎಲ್ಲ ಶಿಕ್ಷಕರಿಗೆ ಪನ್ನೀರು ಸಿಂಪಡಿಸಿ, ಪುಷ್ಪಾರ್ಚನೆ ಮಾಡಿ, ಅರಸಿನ ಕುಂಕುಮ ಕೊಟ್ಟು, ಆರತಿ ಬೆಳಗಿ, ಸಿಹಿ ನೀಡಿ ಗೌರವಿಸಲಾಯಿತು.


ಕಳೆದ ಎಂಟು ವರ್ಷಗಳಿಂದ ಶಾಲೆ ಹತ್ತನೇ ತರಗತಿಯಲ್ಲಿ ಶೇ.೧೦೦ ಸಾಧನೆ ಮಾಡುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಪರೀಕ್ಷೆ ಬರೆದ ೨೩ ಮಕ್ಕಳಲ್ಲಿ ೧೩ ಮಂದಿ ಉನ್ನತ ಶ್ರೇಣಿಯಲ್ಲಿ ಹಾಗೂ ೧೧ ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನ ನಡೆಯಿತು.ಸಂಸ್ಥೆಯ ಅಧ್ಯಕ್ಷ ರಂಗನಾಥ ರೈ ಗುತ್ತು ಅಧ್ಯಕ್ಷತೆ ವಹಿಸಿದ್ದರು.


ಸಂಸ್ಥೆಯ ಸಂಚಾಲಕ ಡಾ. ಸತೀಶ್ ರಾವ್ ಸ್ವಾಗತಿಸಿ ಪ್ರಸ್ತಾವನೆಗೈದರು. ಅರವಿಂದ ದರ್ಭೆ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯಶಿಕ್ಷಕ ರಾಜೇಶ ಮತ್ತು ಶಿಕ್ಷಕರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net