ಕಾವಲು ಹನುಮಂತ ದೇವರಿಗೆ ಅಭಿಷೇಕ

NYK POOJE 09 (1)
Published on

ನಾಯಕನಹಟ್ಟಿ: ಸಮೀಪದ ಗುಂತಕೋಲಮ್ಮನಹಳ್ಳಿ ಅರಣ್ಯ ಪ್ರದೇಶದಲ್ಲಿ ನೆಲೆಗೊಂಡಿರುವ ಕಾವಲು ಆಂಜನೇಯ ಸ್ವಾಮಿಗೆ ಶನಿವಾರ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಗಳು ನೆರವೇರಿದವು. ಮುರುಳಿಧರ ಶಾಸ್ತ್ರಿ ನೇತೃತ್ವದಲ್ಲಿ ಅಭಿಷೇಕ, ಕ್ಷೇತ್ರದಲ್ಲಿರುವ ನಾಗಬನದಲ್ಲಿ ನಾಗಾರಾಧನೆ, ಬಿಲ್ವಾರ್ಚನೆ ಮುಂತಾದ ವಿಧಿ ವಿಧಾನಗಳು, ಮಧ್ಯಾಹ್ನ 1 ಗಂಟೆಗೆ ಮಹಾ ಮಂಗಳಾರತಿ, ಹೂವಿನ ಹಾರಗಳ ಹರಾಜು ಪ್ರಕ್ರಿಯೆ ನಡೆಯಿತು.

ರೇಖಲಗೆರೆ ಹಾಗೂ ರೇಖಲಗೆರೆ ಲಂಬಾಣಿಹಟ್ಟಿ ಗ್ರಾಮಸ್ಥರು ಅನ್ನದಾಸೋಹ ಏರ್ಪಡಿಸಿದ್ದರು. ಪೂಜಾ ಕಾರ್ಯದಲ್ಲಿ ಕೂಡ್ಲಿಗಿ, ಮೊಳಕಾಲ್ಮೂರು, ಜಗಳೂರು, ಚಳ್ಳಕೆರೆ, ಬೆಂಗಳೂರು ಸೇರಿ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net