ಬೇಲೂರು ಶ್ರೀ ಚನ್ನಕೇಶವಸ್ವಾಮಿಗೆ ಅಭಿಷೇಕ

10blrp5.
ವೈಕುಂಠ ಏಕಾದಶಿ ಅಂಗವಾಗಿ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವರ ಮೂರ್ತಿಗೆ ಅಭಿಷೇಕದ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿರುವುದು.
Published on

ಬೇಲೂರು: ವೈಕುಂಠ ಏಕಾದಶಿ ದಿನವಾದ ಶುಕ್ರವಾರ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಅಭಿಷೇಕದೊಂದಿಗೆ ವಿವಿಧ ಪುಷ್ಪಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಿ ಭಕ್ತರ ಸಮ್ಮುಖದಲ್ಲಿ ಹಿರಿಯ ಅರ್ಚಕ ಶ್ರೀನಿವಾಸ್ ಭಟ್ಟರ್ ವಿಶೇಷ ಪೂಜೆ ನೆರವೇರಿಸಿದರು.

ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಪ್ರತಿನಿತ್ಯವೂ ವೈಕುಂಠ ಇರುವುದರಿಂದ ಇಲ್ಲಿ ಅಂಥ ವಿಶೇಷ ಆಚರಣೆ ಇರುವುದಿಲ್ಲ. ಹೀಗಾಗಿ ದೇವರಿಗೆ ವಿಶೇಷ ಅಭಿಷೇಕ ನೆರವೇರಿಸಿ, ನಂತರ ದೇವರಿಗೆ ಪುಷ್ಪಾಲಂಕಾರದೊಂದಿಗೆ ಪೂಜೆ ಸಲ್ಲಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net