ಇಂದು ಅಭೀಷ್ ಸ್ಕ್ವೇರ್ ಲೋಕಾರ್ಪಣೆ

mng_10 oct abhish
Published on

ಮಂಗಳೂರು: ಕರಾವಳಿಯ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದಿಗ್ಗಜ ಎನಿಸಿರುವ ಅಭೀಷ್ ಬಿಲ್ಡರ್ಸ್ ಸಂಸ್ಥೆಯ ಕನಸಿನ ವಸತಿ ಸಮುಚ್ಚಯ ಯೋಜನೆ ಅಭೀಷ್ ಸ್ಕ್ವೇರ್ ವಸತಿ ಸಮುಚ್ಚಯ ಪೂರ್ಣಗೊಂಡಿದ್ದು, ಅ.4ರಂದು ಲೋಕಾರ್ಪಣೆಯಾಗಲಿದೆ. ವಸತಿ ಸಮುಚ್ಚಯ ಪೂರ್ಣಗೊಂಡ ಬಳಿಕ ಮಾರಾಟಕ್ಕಾಗಿ ಮೀಸಲಿಟ್ಟಿದ್ದ ಶೇ.10ರಷ್ಟು ವಸತಿಗಳನ್ನು ಅ. 4ರ ಬಳಿಕ ಮಾರಾಟ ಮಾಡಲಾಗುವುದು ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಪುಷ್ಪರಾಜ್ ಜೈನ್ ತಿಳಿಸಿದ್ದಾರೆ.

ನಗರದ ಪ್ರಮುಖ ಭಾಗ ಎಂದರೆ ಪ್ರೈಮ್ ಲೊಕೇಷನ್‌ನಲ್ಲಿ ಒಂದಾಗಿರುವ ಕೆಪಿಟಿ ಸಮೀಪ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಭೀಷ್ ಸ್ಕ್ವೇರ್ ನಿರ್ಮಾಣವಾಗಿದೆ. ಮೂರು ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ ರಸ್ತೆ, ಮಂಗಳೂರು ನಗರವನ್ನು ಸಂಪರ್ಕಿಸುವ ಸಮೀಪದಲ್ಲೇ ನಿರ್ಮಾಣವಾಗಿದೆ. ಈ ಯೋಜನೆಯ ಪೂರ್ಣಗೊಂಡಿದ್ದು, ಶೇ.40ರಷ್ಟು ಖರೀದಿದಾರರು ಈಗಾಗಲೇ ವಾಸ್ತವ್ಯ ಹೂಡಿರುತ್ತಾರೆ. ಇದೀಗ ಅಧಿಕೃತವಾಗಿ ಕಟ್ಟಡವನ್ನು ಅ.4ರಂದು ಲೋಕಾರ್ಪಣೆಗೊಳಿಸಲಾಗುವುದು ಎಂದರು.

*ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಂಚಲನ

ಕೋವಿಡ್ 19ರ ಬಳಿಕ ರಿಯಲ್ ಎಸ್ಟೇಟ್ ಉದ್ಯಮ ನಿಂತಿದ್ದ ವೇಳೆ ಯೋಜನೆಯ ಭೂಮಿ ಪೂಜೆ ಹಾಗೂ ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ವಿಶೇಷ ಕೊಡುಗೆ ಘೋಷಣೆ ಮಾಡಿ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಂಚಲನ ಮೂಡಿಸಿದ ಯೋಜನೆ ಇದಾಗಿತ್ತು. ಈ ಯೋಜನೆಯಲ್ಲಿ ಮನೆ ಖರೀದಿಗೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಅಭೀಷ್ ಬಿಲ್ಡರ್ಸ್ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದ್ದು, ಇದರಿಂದಾಗಿ ಮನೆ ಖರೀದಿಗೆ ಸುಲಭವಾಗಿ ಗ್ರಾಹಕರಿಗೆ ಹಣಕಾಸು ಸೌಲಭ್ಯ ಸಿಗಲಿದೆ. ಹಬ್ಬಗಳ ರಾಜ ನವರಾತ್ರಿ ಹಾಗೂ ದೀಪಾವಳಿ ಸಂದರ್ಭದಲ್ಲಿ ಹಲವು ಸಂಕಲ್ಪಗಳು ಇರುತ್ತವೆ. ಅದರಲ್ಲಿ ಮನೆ ಖರೀದಿಯೂ ಒಂದಾಗಿರುತ್ತದೆ. ಆದರೆ ಹಣಕಾಸಿನ ಹೊಂದಾಣಿಕೆ ಕೊರತೆಯಿಂದ ಅದೆಷ್ಟೋ ಮಂದಿಯ ಕನಸು ನನಸಾಗಿರುವುದಿಲ್ಲ. ಆದರೆ ಈ ವರ್ಷ ಕನಸು ನನಸಾಗಿಸುವ ಕ್ಷಣವನ್ನು ಅಭೀಷ್ ಸಂಸ್ಥೆಯು ಗ್ರಾಹಕರಿಗೆ ನೀಡುತ್ತಿದೆ.

*ಹೆಚ್ಚಿನ ಮಾಹಿತಿಗಾಗಿ: ಮಂಗಳೂರಿನ ಕೆ.ಕೆ.ಆರ್.ರಸ್ತೆಯ ಕುಶೆ ಸಧನದ ಮೂರನೇ ಮಹಡಿಯಲ್ಲಿರುವ ಅಭೀಷ್ ಕಚೇರಿಗೆ ಭೇಟಿ ನೀಡಬೇಕು. ಇಲ್ಲಿ ಅಭೀಷ್‌ನ ತಾಂತ್ರಿಕ ತಂಡ ಸ್ಥಳದಲ್ಲೇ ಇರುತ್ತಾರೆ. ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿಯ ಗುಣಮಟ್ಟವನ್ನು ಖಚಿತ ಪಡಿಸಿ ಗ್ರಾಹಕರು ಖರೀದಿ ಮಾಡಬಹುದಾಗಿದೆ.

-------------------

ಅಭೀಷ್ ಸ್ಕ್ವೇರ್‌ನ ವಿಶೇಷತೆ

ಮಂಗಳೂರಿನ ಕೇಂದ್ರ ಭಾಗದಲ್ಲಿ ಅಂದರೆ ಪ್ರೈಮ್ ಲೊಕೇಷನ್‌ನಲ್ಲಿದ್ದು, ಸಾರ್ವಜನಿಕ ಸಾರಿಗೆ, ಉತ್ತಮ ಪರಿಸರ, ಶಾಪಿಂಗ್ ಮಾಲ್, ಶಿಕ್ಷಣ ಸಂಸ್ಥೆ, ವೃತ್ತಿಪರ ಶಿಕ್ಷಣ ಸಂಸ್ಥೆ, ವೈದ್ಯಕೀಯ ಕಾಲೇಜುಗಳು ಆಸುಪಾಸಿನಲ್ಲಿರುವ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲು ನಿಲ್ದಾಣವನ್ನು ಸುಲಭವಾಗಿ ತಲುಪುವಂತಿರುವ ಅಭೀಷ್ ಸ್ಕ್ವೇರ್‌ನಲ್ಲಿ ಗ್ರಾಹಕರು ಮನೆ ಖರೀದಿ ಮಾಡಬಹುದಾಗಿದೆ. 10 ಲೆವೆಲ್‌ನಲ್ಲಿ 100 ಫ್ಲ್ಯಾಟ್, 3 ಲೆವೆಲ್‌ನ ಪಾಕಿರ್ಂಗ್ ಸೌಲಭ್ಯ, ಚತುಷ್ಪಥ ಕಾಂಕ್ರೀಟ್ ರಸ್ತೆಗೆ ತಾಗಿಕೊಂಡು ವಸತಿ ಸಮುಚ್ಚಯ, ರಾಷ್ಟ್ರೀಯ ಹೆದ್ದಾರಿ 75 ಹಾಗೂ 66ಕ್ಕೆ ಸುಲಭದಲ್ಲಿ ಸಂಪರ್ಕ, ಅತ್ಯಾಧುನಿಕ ಸೌಲಭ್ಯ, ಟ್ರಾಫಿಕ್ ಜಂಜಾಟದಿಂದ ಮುಕ್ತಿ- ಸ್ವಚ್ಛಂದ ಜೀವನಕ್ಕೆ ಪರಿಪೂರ್ಣ ಸಮುಚ್ಚಯ ಎಲ್ಲ ಮನೆಗಳನ್ನು ವಾಸ್ತು ಪ್ರಧಾನವಾಗಿಸಿಕೊಂಡು ವಿನ್ಯಾಸ, ಮಲ್ಟಿ ಜಿಮ್, ಮೆಡಿಟೇಶನ್ ಸೆಂಟರ್, ಪಾರ್ಟಿ ಹಾಲ್, ಚಿಲ್ಡ್ರನ್ಸ್ ಪ್ಲೇ ಏರಿಯಾ, ಅತಿಥಿಗಳು ಹಾಗೂ ಮಾಲೀಕರಿಗೆ ಪ್ರತ್ಯೇಕ ಕಾರು ಪಾಕಿರ್ಂಗ್, ಆಧುನಿಕ ಪರಿಕರಗಳೊಂದಿಗೆ ಆಕರ್ಷಕ ವಿನ್ಯಾಸಗಳು ಅಭೀಷ್ ಸ್ಕ್ವೇರ್‌ನ ವಿಶೇಷತೆಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net