

ಮೈಸೂರು: ವಿಶ್ವೇಶ್ವರ ನಗರದ ಮಹರ್ಷಿ ಪಬ್ಲಿಕ್ ಶಾಲೆ ಆವರಣದಲ್ಲಿ ಆರಂಭಗೊಂಡ ‘ಅಭಿನಯ’ ಬೇಸಿಗೆ ಶಿಬಿರಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಮೇ 10ರ ವರೆಗೆ ಆಯೋಜಿಸಿರುವ ಶಿಬಿರಕ್ಕೆ ಚಾಲನೆ ನೀಡಿದ ಹಿರಿಯ ಕಲಾವಿದ ಸುಚೇಂದ್ರ ಪ್ರಸಾದ್ ಮಾತನಾಡಿ, ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ. ಅದನ್ನು ಗುರುತಿಸಲು ಇಂತಹ ಶಿಬಿರಗಳ ಅಗತ್ಯವಿದೆ. ಮೈಸೂರಿನಲ್ಲಿ ಆದಿಲೋಕೇಶ್ ಸೇರಿದಂತೆ ಕಲಾವಿದರ ಕುಟುಂಬಗಳೇ ಇದ್ದು, ಸಾಕಷ್ಟು ಜನ ಹೆಸರು ಮಾಡಿದ್ದಾರೆ. ಮುಂದಿನ ಪೀಳಿಗೆಗೆ ಕಲೆಧಾರೆ ಎರೆಯುವ ಕೆಲಸ ಆಗಬೇಕು ಎಂದು ಶುಭ ಹಾರೈಸಿದರು.
ಶಿಬಿರದ ಆಯೋಜಕ ನಟ ಆದಿ ಲೋಕೇಶ್, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ಮಹರ್ಷಿ ಪಬ್ಲಿಕ್ ಶಾಲೆಯ ಸಿಇಒ ತೇಜಸ್ ಶಂಕರ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ದೀಪಕ್ ಮೈಸೂರು, ನಟ ಜೆ ಪಿ ಜಯಪ್ರಕಾಶ್, ಚೇತನ್ ರಮೇಶ್, ವಿವಿಧ ಸಂಘಟನೆಯ ರೇಖಾ ಶ್ರೀನಿವಾಸ್, ಪ್ರಿಯಾಂಕ, ಮಹಾನ್ ಶ್ರೇಯಸ್ ಸೇರಿದಂತೆ ಇತರರು ಇದ್ದರು.