

ಹುಬ್ಬಳ್ಳಿ: ಇಲ್ಲಿಯ ಅಭಿನಯ ಸ್ಕೂಲ್ ಆಫ್ ಡ್ಯಾನ್ಸ್ ರಜತ ಮಹೋತ್ಸವ ಅಂಗವಾಗಿ ಜುಲೈ 27-ರಂದು ಬೆಳಗ್ಗೆ 11ಕ್ಕೆ ಇಲ್ಲಿನ ದೇಶಪಾಂಡೆನಗರದ (ಗುಜರಾತ್ ಭವನ ಹಿಂದೆ) ವಿದುಷಿ ಡಾ. ಸೀಮಾ ಉಪಾಧ್ಯಾಯ ಅವರ ನಿವಾಸದಲ್ಲಿ ಉದಯೋನ್ಮುಖ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ರಜತೋತ್ಸವ ಸಂದರ್ಭದಲ್ಲಿ ವರ್ಷವಿಡೀ ವಿದುಷಿ ಡಾ. ಸೀಮಾ ಉಪಾಧ್ಯಾಯ ಅವರ ನೇತೃತ್ವದಲ್ಲಿ ವಿನೂತನ ಪ್ರಯತ್ನ, ಪ್ರಯೋಗಗಳ ಮೂಲಕ 24 ವಿವಿಧ ಕಲಾಪ್ರಕಾರಗಳ ಕಲಾಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಇದೀಗ ಉದಯೋನ್ಮುಖ ಕಲಾವಿದರು ಸಂಗೀತ ಕಚೇರಿ ನಡೆಸಲಿದ್ದಾರೆ. ಶಿವಾನಿ ಕವಠೇಕರ ಅವರ ಗಾಯನ, ವಿಭಾ ಸುಬ್ಬಣ್ಣ ದೀಕ್ಷಿತ್ ಅವರ ಸಿತಾರ ವಾದನದ ಜೊತೆಗೆ ಚಿದಂಬರ ಜೋಶಿ ಅವರ ಹಾಮೋರ್ನಿಯಂ ಸಾಥ್ ಹಾಗೂ ಸೋಲೋ ಪ್ರಸ್ತುತಿ ನಡೆಯಲಿದ್ದು, ಡಾ. ನಾಗಲಿಂಗ ಮುರಗಿ ತಬಲಾ ಸಾಥ್ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.