

ಬಸವಕಲ್ಯಾಣ: ನಗರದ ಸಂಸ್ಥಾನ ಗವಿಮಠದಲ್ಲಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ೧೯ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ ೩೮ನೇ ಜನ್ಮದಿನ ಕಾರ್ಯಕ್ರಮ ಸೆ.೨೮ರಂದು ಅರ್ಥಪೂರ್ಣವಾಗಿ ನಡೆಸಲು ಆರ್ಯ ಸಮಾಜ ಸಭಾ ಭವನದಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಸೆ.೨೮ ನಮ್ಮ ಜನ್ಮದಿನದಂದೇ ಪಟ್ಟಾಧಿಕಾರವಾದ ನಿಮಿತ್ತ ಸಮಾಜ ಸುಧಾರಣೆ ಸಂಕಲ್ಪದಂತೆ ಪ್ರತಿವರ್ಷ ಸಾಮಾಜಿಕ ಸಂದೇಶದೊಂದಿಗೆ ಜನ್ಮದಿನ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ನುಡಿದರು.
೨೭ರಂದು ಬೆಳಗ್ಗೆ ೧೦ಕ್ಕೆ ಪ್ಲಾಸ್ಟಿಕ್‌ಮುಕ್ತ ಜೀವನ ಎಂಬ ಸಾಮಾಜಿಕ ಸಂದೇಶದೊಂದಿಗೆ ಎಲ್ಲ ಸಮುದಾಯದ ಸದ್ಭಕ್ತರೊಂದಿಗೆ ಗಾಂಧಿ ವೃತ್ತದಿಂದ ತ್ರಿಪುರಾಂತ ಪ್ರವಾಸಿ ಭವನವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಸಮಾಜದ ಎಲ್ಲ ಸದ್ಭಕ್ತರು ಪಾಲ್ಗೊಳ್ಳಬೇಕು ಎಂದು ಕೋರಿದರು.
ಪ್ರಮುಖರಾದ ಸೋನಾಲ್ ವಿಜಯಸಿಂಗ್, ಬಿಡಿವಿಸಿ ನಿರ್ದೇಶಕ ಮಲ್ಲಯ್ಯ ಹಿರೇಮಠ, ಗವಿಮಠದ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ಮಲ್ಲಿಕಾರ್ಜುನ ಅಲಗುಡೆ, ಶ್ರೀನಿವಾಸ ಬಿರಾದಾರ, ಕಸಾಪ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ, ಮುಖ್ಯ ಶಿಕ್ಷಕ ರಮೇಶ ರಾಜೋಳೆ ಮಾತನಾಡಿದರು.
ಸಿದ್ಧಾರ್ಥ ಭಾವಿದೋಡ್ಡಿ, ಸಂದೀಪ ಪಾಟೀಲ್, ರುದ್ರೇಶ್ವರ ಗೋರ್ಟಾ, ಶಿವಲಿಂಗ ಸ್ವಾಮಿ ಕನಾಡೆ, ನಾಗಪ್ಪ ಚಾಮಲ್ಲೆ, ಶ್ರೀಶೈಲ ವಾತಡೆ, ವಿ.ಎಸ್. ರಾಜೋಳೆ, ಗೋವಿಂದರೆಡ್ಡಿ ಕೋತಾಪಲ್ಲೆ, ಶರಣು ಅಲಗೂಡೆ, ಶೇಖ ತನ್ವೀರ್ ಅಹ್ಮದ್, ಶಿವಕುಮಾರ ಮುನ್ನೋಳೆ, ಬಾಬು ಮದಕಟ್ಟೆ, ವೀರಶೆಟ್ಟಿ ಎಂ.ಪಾಟೀಲ್ ಇದ್ದರು.
ಸ್ವಾಗತ ಸಮಿತಿ: ಕಾರ್ಯಕ್ರಮ ಯಶಸ್ಸಿಗೆ ಸ್ವಾಗತ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಎಂಎಲ್ಸಿ ಎಂ. ಜಿ.ಮುಳೆ, ಗೌರವ ಉಪಾಧ್ಯಕ್ಷರಾಗಿ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಲಾ ಬಿ.ನಾರಾಯಣರಾವ, ಅಧ್ಯಕ್ಷರಾಗಿ ಶಾಸಕ ಶರಣು ಸಲಗರ, ಉಪಾಧ್ಯಕ್ಷರಾಗಿ ಮಾಜಿ ಶಾಸಕರಾದ ಮಲ್ಲಿಕಾರ್ಜುನ ಖೂಬಾ, ವಿಜಯಸಿಂಗ್, ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ಅವರನ್ನು ಆಯ್ಕೆ ಮಾಡಲಾಯಿತು. ಪಾದಯಾತ್ರೆ ಸಮಿತಿಗೆ ಲೋಕೇಶ ಮೋಳಕೆರೆ, ರವಿ ನಾವದಗೇಕರ್, ಪ್ರಚಾರ ಸಮಿತಿಗೆ ಶಿವಕುಮಾರ ಬಿರಾದಾರ, ವೇದಿಕೆ ಸಮಿತಿಗೆ ಬಸವಣ್ಣಪ್ಪ ನೆಲೋಗೆ ಹಾಗೂ ಇತರ ಸಮಿತಿಗಳಿಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.