ಅನುಭವದ ಸತ್ವವೇ ಭಾರತೀಯ ತತ್ವಜ್ಞಾನ: ಅಭಿನವ ಶಂಕರ ಭಾರತೀ ಸ್ವಾಮೀಜಿ ಅಭಿಮತ

Swamiji
Published on

ಬೆಂಗಳೂರು: ಭಾರತ ಮುಕ್ತಿಪ್ರಧಾನವಾದ ದೇಶ. ಭರತ ಖಂಡದ ಋಷಿಗಳಿಗೆ ಆದ ಆಂತರಿಕ ಅನುಭವದ ಸತ್ವವೇ ಭಾರತೀಯ ತತ್ವಜ್ಞಾನ ಎಂದು ಎಂದು ಕೂಡಲಿ ಶೃಂಗೇರಿ ಮಹಾಸಂಸ್ಥಾನ ದಣಾಮ್ನಾಯ ಶಾರದಾ ಪೀಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಹೇಳಿದ್ದಾರೆ.

ಮಿಥಿಕ್​ ಸೊಸೈಟಿಯು ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ "ಭಾರತೀಯತೆಯ ಹತ್ತು ಗುಣಗಳು' ವಿಷಯದ ಕುರಿತು ಮಾತನಾಡಿದರು.

ಭಾರತೀಯ ದೃಷ್ಟಿಕೋನದಿಂದ ಭಾರತೀಯ ತತ್ವಶಾಸ್ತ್ರ ಸಿದ್ಧಾಂತ ಬೆಳೆದಿದ್ದು, ನಂತರದಲ್ಲಿ ಅನುಷ್ಠಾನಗೊಂಡಿದೆ. ಏಕಾತ್ಮ ದೃಷ್ಟಿ, ವಿವಿಧತೆಯ ಸ್ವೀಕೃತಿ, ದಿವ್ಯತ್ವ, ಈಶ್ವರ ನಿಷ್ಠೆ, ಸಮುತ್ಕರ್ಷ, ಸಾಮಾಹಿಕ ಚಾರಿತ್ರ್ಯ, ಕುಟುಂಬಭಾವ, ದಾಯಿತ್ವಪ್ರೆ, ಇತಿಹಾಸ ಕೇಂದ್ರಿತವಲ್ಲದ ಶಾಸ್ತ್ರೀಯ ಮತ್ತು ಪುರುಷಾರ್ಥ/ತ್ರಿವಿಧ ದೃಷ್ಟಿ ಭಾರತೀಯತೆಯ ಹತ್ತು ಗುಣಗಳು ಎಂದು ವಿವರಿಸಿದರು.

ಲೋಕರೂಢಿಯಲ್ಲಿರುವುದೇ ಭಾರತದಲ್ಲಿ ಶಾಸ್ತ್ರವಾಗಿ ಪರಿವರ್ತಿತವಾಯಿತು. ಭಾರತೀಯ ಶಾಸ್ತ್ರದ ಅಧ್ಯಯನ ಒಂದು ಏಕೀಕೃತ ವಿಧಾನವಾಗಿದೆ. ಅದರಲ್ಲಿ ಜ್ಞಾನಕ್ಕೆ ಪ್ರತ್ಯೇಕವಾದ ಅಸ್ತಿತ್ವವಿಲ್ಲ. ಶಿಕ್ಷಣದ ಉದ್ದೇಶ ವ್ಯಕ್ತಿಯನ್ನು ಸಂಸ್ಕಾರವಂತನನ್ನಾಗಿ ಮಾಡುವುದರ ಜತೆಗೆ, ಆತನಲ್ಲಿ ಸಾಮರ್ಥ್ಯ ವೃದ್ಧಿವುವುದಾಗಿದೆ. ಭಾರತೀಯ ದೃಷ್ಟಿಕೋನದಲ್ಲಿ ವ್ಯಕ್ತಿ, ಕುಟುಂಬ, ಸಮಾಜ ಮತ್ತು ರಾಷ್ಟ್ರ ಒಂದು ಅಖಂಡ ಮಂಡಲವಾಗಿದೆ. ಸಾಮೂಹಿಕ ಚಾರಿತ್ರ್ಯವನ್ನು ಬೆಳೆಸುವುದು ಭಾರತೀಯತೆಯ ಉದ್ದೇಶ. ಕುಟುಂಬ ಭಾವದ ಜತೆಗೆ ತ್ಯಾಗ, ಸಹಯೋಗ ಮತ್ತು ದಾಯಿತ್ವಪ್ರೆ ಬೆಳೆಸುವುದು ತತ್ವಶಾಸದಲ್ಲಿ ಅಡಕವಾಗಿದೆ. ವಿದ್ಯಾರ್ಜನೆಯಿಂದ ಪಡೆದಂತಹ ಜ್ಞಾನವನ್ನು ಇತರರಿಗೆ ಹಂಚುವ ಕೆಲಸವನ್ನು ಶಿಕ್ಷಕರು ಸದಾಕಾಲ ಮಾಡುತ್ತಿದ್ದರು ಎಂದು ಹೇಳಿದರು.

ಪುರುಷಾರ್ಥಗಳು ಧರ್ಮದ ತಳಹದಿಯ ಮೇಲೆ ರೂಪಿತವಾಗಿವೆ. ಈ ಕಾರಣದಿಂದಲೇ ಇತ್ತೀಚೆಗೆ ಸ್ವದೇಶಿ ಇಂಡಾಲಜಿ (ಭಾರತಶಾಸ್ತ್ರ) ಅಧ್ಯಯನ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಿಥಿಕ್​ ಸೊಸೈಟಿ ಆಯೋಜಿಸಿದ್ದ ಕುಕ್ಕೆ ಸುಬ್ರಹ್ಮಣ್ಯ ಇತಿಹಾಸ ಮತ್ತು ಸಂಸತಿ ವಿಚಾರ ಸಂಕಿರಣದ ಪ್ರಬಂಧ ಸಂಪುಟವನ್ನು ಬಿಡುಗಡೆಗೊಳಿಸಲಾಯಿತು. ಹಿರಿಯ ಪತ್ರಕರ್ತ ದು.ಗು. ಲ್ಮಣ, ಮಿಥಿಕ್​ ಸೊಸೈಟಿಯ ಅಧ ಪೊ.ಕೃ. ನರಹರಿ, ಉಪಾಧ್ಯ ಪೊ.ಎಂ. ಕೊಟ್ರೇಶ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net