ಸಾಧಕ ಮಹಿಳೆಯರಿಗೆ ‘ಅಭಿಜಾತ ಸ್ತ್ರೀ’ ಪ್ರಶಸ್ತಿ

13
Published on

ಮೈಸೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಉತ್ತಿಷ್ಠ ಭಾರತ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಸಾಧಕ ಮಹಿಳೆಯರಿಗೆ ‘ಅಭಿಜಾತ ಸ್ತ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎ.ಪುಷ್ಪ ಅಯ್ಯಂಗಾರ್, ಡಾ.ಕೆ.ಲೀಲಾಪ್ರಕಾಶ್, ವಿನುತಾ ಎಸ್.ಗಿರಿ, ಡಾ.ಪೂರ್ಣಿಮಾ, ಡಾ.ಭಾವನಾ ಆರ್.ಮಧುಸೂದನ್ ಅವರಿಗೆ ‘ಅಭಿಜಾತ ಸ್ತ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಕೃಪಾ ಫಡ್ಕೆ, ಸಮರ್ಪಣಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಧಾ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net