ಅಧಿಕಾರಿಗಳ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡುವೆ ; ಶಾಸಕ ಅಭಯ್

IMG-20230807-WA0083.jpg
Published on

ಬೆಳಗಾವಿ : ‘ಬಿಜೆಪಿ ಸರ್ಕಾರದಲ್ಲಿ ಈ ಕೇಂದ್ರ ಸ್ಥಾಪನೆಗೆ ಅನುದಾನ ಒದಗಿಸಲಾಗಿದ್ದು, ಕೈಗಾರಿಕೋದ್ಯಮಿಗಳ ನಿಯೋಗದ ಜತೆಗೆ ಅಂದಿನ ಸಚಿವರೊಂದಿಗೆ ನಿರಂತರ ಸಭೆ ಮಾಡಿ, ಸರ್ಕಾರದ ಆದೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದೇವು. ಅವರಿಂದಲೇ ಉದ್ಘಾಟಿಸುವ ಇಚ್ಛೆ ನಮ್ಮಲ್ಲಿತ್ತು. ಆದರೆ, ಅದು ಶಿಷ್ಟಾಚಾರದಡಿ ಬರುವುದಿಲ್ಲ. ಹೀಗಾಗಿ, ಈಗಿನ ಸಚಿವರು ಉದ್ಘಾಟಿಸಿದರು ಎಂದು ಶಾಸಕ ಅಭಯ್ ಪಾಟೀಲ ಹೇಳಿದರು.

ಶಿಷ್ಟಾಚಾರದ ಬಗ್ಗೆ ವಿವರಿಸುವ ಅಧಿಕಾರಿಗಳಿಗೆ ‘ನನ್ನ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಕಾರ್ಯಕ್ರಮಕ್ಕೆ ನಾನೇ ಅಧ್ಯಕ್ಷತೆ ವಹಿಸಿಕೊಳ್ಳಬೇಕೆಂಬ ಶಿಷ್ಟಾಚಾರ ಏಕೆ ಅರಿವಿಗೆ ಬರಲಿಲ್ಲ ಎನ್ನುವುದು ವಿಪರ್ಯಾಸ. ಅಧಿಕಾರಿಗಳು ನನ್ನನ್ನು ಸೌಜನ್ಯಕ್ಕೂ ಆಹ್ವಾನಿಸಿಲ್ಲ. ಸ್ಥಳೀಯ ಶಾಸಕರನ್ನು ಕಡೆಗಣಿಸಿದ್ದು ಸಹಕ್ಕು ಚ್ಯುತಿ ಮಾಡಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಾಡಲಾಗುವುದು ಎಂದು ಶಾಸಕ ಅಭಯ್ ಕಿಡಿಕಾರಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net