

ಉಪ್ಪಿನಂಗಡಿ: ಇಲ್ಲಿನ 187 ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಮಾದರಿ ಉಪ್ಪಿನಂಗಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ 2024-27ರ ಸಾಲಿನ ಎಸ್‌ಡಿಎಂಸಿ ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ರಾಮನಗರ, ಉಪಾಧ್ಯಕ್ಷರಾಗಿ ಶೀಲಾ ಸಿ.ಎ ಪದವು ಆಯ್ಕೆಯಾಗಿದ್ದಾರೆ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಾಗಿ ಕಲಂದರ್ ಶಾಫಿ ನೆಕ್ಕಿಲಾಡಿ, ಫಾರೂಕ್ ಜಿಂದಗಿ, ಸುನೀಲ್ ಕುಮಾರ್ ದಡ್ಡು, ರವಿ ಪೂಜಾರಿ, ಮೊಯ್ದೀನ್ ಕುಟ್ಟಿ, ಸಂತೋಷ್ ಕುಮಾರ್, ಮುಸ್ತಫಾ ನೆಕ್ಕಿಲಾಡಿ, ರಾಜೇಶ್, ಬಿ.ನಬೀಸಾ, ಪದ್ಮಾವತಿ, ಕೈರುನ್ನೀಸ ಐಡಿಯಲ್, ಅಕ್ಷತಾ ಡಿ.ಗೌತಮಿ, ರಝೀನ, ತಸ್ಲೀಮ, ಮಮತಾ ಆಯ್ಕೆಯಾದರು.
ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷ ವಿದ್ಯಾ ಲಕ್ಷ್ಮೀ ಪ್ರಭು ಹಾಗೂ ಮಾರ್ಗದರ್ಶಕರಾಗಿ ಆಗಮಿಸಿದ ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಕವಿತಾ ಅವರ ಮಾರ್ಗದರ್ಶನದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನಾಮನಿರ್ದೇಶಿತ ಸದಸ್ಯರಾಗಿ ಗ್ರಾಮ ಪಂಚಾಯಿತಿ ಸದಸ್ಯ ತೌಸೀಫ್ ಯು.ಟಿ., ಹಿರಿಯ ಶಿಕ್ಷಕ ಗಂಗಾಧರ ಬಿ., ವಿದ್ಯಾರ್ಥಿ ನಾಯಕ ಜ್ಞಾನೇಶ್, ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ಸಹಾಯಕಿ ಗಾಯತ್ರಿ, ಅಂಗನವಾಡಿ ಶಿಕ್ಷಕಿ ಪದ್ಮಾವತಿ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ಹನುಮಂತಯ್ಯ ಆಯ್ಕೆಯಾದರು. ಎಸ್‌ಡಿಎಂಸಿ ರಚನಾ ಸಭೆಯಲ್ಲಿ ಶಾಲಾ ಶಿಕ್ಷಕ ಸಂತೋಷ್ ಸ್ವಾಗತಿಸಿದರು. ಶಿಕ್ಷಕಿ ಕೃಷ್ಣವೇಣಿ ವಂದಿಸಿದರು.