ಜೈನಮುನಿ ಕೊಲೆ ಪ್ರಕರಣ ಉಸ್ತುವಾರಿ ಐಜಿಪಿಗೆ ವಹಿಸಿ: ಅಬ್ದುಲ್ ಅಜೀಂ ಆಗ್ರಹ

IMG-20230711-WA0020.jpg
Published on


ಬೆಳಗಾವಿ:ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರನ್ನು ಕೊಲೆ  ಪ್ರಕರಣ ಮೇಲ ಉಸ್ತುವಾರಿಯನ್ನು ಉತ್ತರ ವಲಯದ ಐಜಿಪಿಗೆ ವಹಿಸಬೇಕು ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ
ಅಬ್ದುಲ್ ಅಜೀಮ್  ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈನಮುನಿ‌ ಕೊಲೆ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಬೇಕು. ಈ‌ಪ್ರಕರಣಕ್ಕೆ ಸಹಾಯ ಮಾಡದಿವರನ್ನು ಬಂಧಿಸಬೇಕು.‌ಆರೋಪಿಗಳಿಗೆ ಮರಣದಂಡನೆ ಆಗಬೇಕು. ಆ ನಿಟ್ಟಿನಲ್ಲಿ ತನಿಖೆ ನಡೆಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net