ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ

5ckd2-Web
ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿ ಭೀಮವಾದ ಜಿಲ್ಲಾ ಸಮಿತಿ ಕಾರ್ಯಕರ್ತರು ಚಿಕ್ಕೋಡಿ ಪಟ್ಟಣದಲ್ಲಿ ಪ್ರತಿಭಟಿಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ರಾಜು ತಳವಾರ, ಶೇಖರ ಪ್ರಭಾತ, ಮಹಾದೇವ ಮುನ್ನೊಳ್ಳಿಕರ್, ರಾಘವೇಂದ್ರ ಸನದಿ, ತುಕಾರಾಮ ರಾಯಮಾನೆ ಮತ್ತಿತರರು ಉಪಸ್ಥಿತರಿದ್ದರು.
Published on

ಚಿಕ್ಕೋಡಿ: ಉತ್ತರ ಪ್ರದೇಶದಲ್ಲಿ ನಡೆದ ಯುವತಿ ಅತ್ಯಾಚಾರ ಖಂಡಿಸಿ ಹಾಗೂ ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟಿಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಸ್ಥಳೀಯ ಸರ್ಕಾರ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಯುವತಿಯ ಶವವನ್ನು ಮಧ್ಯರಾತ್ರಿ ದಹನ ಮಾಡಿ ಪ್ರಕರಣ ಮುಚ್ಚಿಹಾಕಲು ಸ್ಥಳೀಯ ಆಡಳಿತ ಮುಂದಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಮಿತಿ
ಸಂಚಾಲಕ ರಾಜು ತಳವಾರ, ಶೇಖರ ಪ್ರಭಾತ, ಮಹಾದೇವ ಮುನ್ನೊಳ್ಳಿಕರ, ರಾಘವೇಂದ್ರ ಸನದಿ, ತಾಲೂಕು ಸಂಚಾಲಕ ತುಕಾರಾಮ ರಾಯಮಾನೆ, ಸಿದ್ದು ಕಾಂಬಳೆ, ನಾಮದೇವ ಕಾಂಬಳೆ, ಬಸು ರಾಯಮಾನೆ, ಅರ್ಜುನ ಮಾನೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net