ಮೈಸೂರಿನಲ್ಲಿ ಯುವಕನ ಅಪಹರಣ : ಮೂವರು ಆರೋಪಿಗಳು ಬಂಧನ

Crime Scene
Published on

ಮೈಸೂರು: ಯುವಕನೊಬ್ಬನನ್ನು ಅಪಹರಿಸಿ ನಗದು ಹಾಗೂ ಚಿನ್ನಾಭರಣ ದೋಚಿದ್ದ ಮೂವರು ಆರೋಪಿಗಳನ್ನು ಮಂಗಳವಾರ ವಿವಿ ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ತಾಲೂಕಿನ ಕಾಮನಕೆರೆ ಹುಂಡಿಯ ರಾಹುಲ್, ಬೆಳವಾಡಿಯ ಅಖಿಲೇಶ್ ಮತ್ತು ಹೂಟಗಳ್ಳಿಯ ನಂದೀಶ್ ಬಂಧಿ ತರು. ಆರೋಪಿಗಳು ಸಿದ್ದಾರ್ಥನಗರದ ಯುವಕ ಚಿರಾಗ್ ಜೈನ್ ಅವರನ್ನು ಏ.23 ರಂದು ತಡರಾತ್ರಿ ಅಪಹರಿಸಿ ಅವರ ಬಳಿ ಇದ್ದ 39 ಗ್ರಾಂ ತೂಕದ 2 ಚಿನ್ನದ ಸರ, ಮೊಬೈಲ್ ಹಾಗೂ 2 ಸಾವಿರ ರೂ.ನಗದು ಕಸಿದಿದ್ದರು.

ರಾಜಸ್ತಾನದಿಂದ ಆಜ್ಮೀರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಗಮಿಸಿದ್ದ ತಂದೆ-ತಾಯಿಯನ್ನು ಕರೆ ತರುವ ಸಲುವಾಗಿ ಚಿರಾಗ್ ಜೈನ್ ಏ.23 ರಂದು ರೈಲ್ವೆ ನಿಲ್ದಾಣದ ಬಳಿ ತೆರಳುತ್ತಿದ್ದ ಸಂದರ್ಭ ಸ್ಕೂಟರ್‌ನಲ್ಲಿದ್ದ ಮೂವರು ಆರೋಪಿಗಳು ನಿತಿನ್ ಜೈನ್‌ರನ್ನು ಅಡ್ಡಗಟ್ಟಿ ಆತನ ಕಾರಿನಲ್ಲಿಯೇ ಹೂಟಗಳ್ಳಿಗೆ ಕರೆದೊಯ್ದು ನಗದು ಹಾಗೂ ಚಿನ್ನಾಭರ ಕಸಿದು ಬೆಳಗ್ಗಿನ ಜಾವ 5ರವರೆಗೆ ಇರಿಸಿಕೊಂಡು ಕಳುಹಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ವಿವಿಪುರಂ ಠಾಣೆ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net