ಗಮನ ಬೇರೆಡೆ ಸೆಳೆದು ಸರ ಅಪಹರಣ

Published on

ಮೈಸೂರು: ಹಣ ಬಿದ್ದಿದೆ ಎಂದು ಗಮನ ಬೇರೆಡೆ ಸೆಳೆದ ಮೂವರು ಮಹಿಳೆಯರ ತಂಡ ವೃದ್ಧೆಯಿಂದ 1.70 ಲಕ್ಷ ರೂ. ಬೆಲೆ ಬಾಳುವ 32 ಗ್ರಾಂ ಚಿನ್ನದ ಸರ ಎಗರಿಸಿದ್ದಾರೆ. ಹುಣಸೂರು ತಾಲೂಕಿನ ಕರಿಮುದ್ದನಹಳ್ಳಿಯ ಗೌರಮ್ಮ (70) ಸರ ಕಳೆದುಕೊಂಡವರು.
ಮೈಸೂರು ನಗರ ಬಸ್ ನಿಲ್ದಾಣದಿಂದ ಹಿನಕಲ್‌ನಲ್ಲಿರುವ ಮಗಳ ಮನೆಗೆ ಹೋಗಲು ಗೌರಮ್ಮ ಸಿಟಿ ಬಸ್ ಹತ್ತಿದ್ದರು. ಪ್ರಯಾಣಿಕರು ಹೆಚ್ಚಾಗಿದ್ದರಿಂದ ನಿಂತಿದ್ದ ಗೌರಮ್ಮ ಅವರಿಗೆ ಮೂವರು ಮಹಿಳೆಯರು, ಕಾಯನ್ (ನಾಣ್ಯ) ಬಿದ್ದಿದೆ ಎಂದು ಬೇರೆಡೆ ಗಮನ ಸೆಳೆದಿದ್ದಾರೆ. ಬಿದ್ದಿದ್ದ ನಾಣ್ಯವನ್ನು ಎತ್ತಿಕೊಡುತ್ತಿದ್ದಾಗ ಸರ ಕಳವು ಮಾಡಿದ್ದಾರೆ. ಬಸ್‌ನಿಂದ ಇಳಿದು ನೋಡಿದಾಗ ಸರ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ವಿಜಯ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net