

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ಮುತ್ತೂರಿನಿಂದ ಮೇಲೂರು ಕಡೆಗೆ ಹೋಗುವ ರಸ್ತೆಯಲ್ಲಿ ಕಾರು ಸುಟ್ಟು ಕರಕಲಾಗಿದ್ದು, ಹಲವು ಅನುಮಾನ ಹುಟ್ಟುಹಾಕಿದೆ. ರಸ್ತೆಯಲ್ಲೇ ಸುಟ್ಟಿರುವ ವಿದ್ಯುತ್ ಚಾಲಿತ ಕಾರಿನ ಸಂಖ್ಯಾಫಲಕ ಅರ್ಧ ಮುರಿದಿದ್ದು, ಕೆಎ 01 ಎಂಎಕ್ಸ್ 64 ಎಂಬ ಸಂಖ್ಯೆಗಳು ಮಾತ್ರ ಕಾಣುತ್ತಿವೆ. ಮುಂಭಾಗದಲ್ಲಿನ ಸಂಖ್ಯಾಫಲಕ ಸಂಪೂರ್ಣವಾಗಿ ಸುಟ್ಟಿದೆ. ಈ ಕಾರು ಯಾರಿಗೆ ಸೇರಿದ್ದು?, ಯಾವ ಕಾರಣಕ್ಕಾಗಿ ಸುಟ್ಟಿದೆ?, ಯಾರಾದರೂ ಸುಟ್ಟುಹಾಕಿದ್ದಾರೆಯೇ? ಇಲ್ಲವೇ ಬೆಂಕಿ ಹೊತ್ತಿಕೊಂಡಿದೆಯೇ ಎನ್ನುವ ಅನುಮಾನಗಳು ಮೂಡಿದ್ದು, ಪೊಲೀಸರ ತನಿಖೆಯಿಂದಷ್ಟೆ ವಾಸ್ತವಾಂಶ ಗೊತ್ತಾಗಬೇಕಿದೆ.
*ಮಾಹಿತಿ ಸಂಗ್ರಹದಲ್ಲಿ ಖಾಕಿ ಪಡೆ
ಕಾರಿನ ದುರ್ಘಟನೆಯ ಹಿನ್ನೆಲೆಯ ಮಾಹಿತಿ ಸಂಗ್ರಹದಲ್ಲಿ ಪೊಲೀಸರು ತೊಡಗಿದ್ದಾರೆ. ಮಾಲೀಕರ ಪತ್ತೆ, ವಿಚಾರಣೆಗೆ ಮುಂದಾಗಿದ್ದಾರೆ. ಸ್ಥಳದಲ್ಲಿ ವಾಹನಕ್ಕೆ ಸಂಬಂಧಪಟ್ಟವರು ಇಲ್ಲದಿರುವುದು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.