

ಚಿತ್ರದುರ್ಗ: ಯಶಸ್ವಿನಿ ಯೋಜನೆಯಡಿ ಆಸ್ಪತ್ರೆಗಳು ಸುಲಿಗೆ ಮಾಡುತ್ತಿವೆ. ಈ ಬಗ್ಗೆ ರೈತರು ಮನವಿ ಸಲ್ಲಿಸಿದರೆ, ವಸೂಲಾದ ಹಣವನ್ನು ಜಿಲ್ಲಾಧಿಕಾರಿ ಕೊಡಿಸಲಿದ್ದಾರೆ ಎಂದು ಸಿರಿಗೆರೆ ಸಾಧು ಸದ್ಧರ್ಮ ಸಮಾಜದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಹೇಳಿದರು.
ಸಿರಿಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಶಿವಾಚಾರ‌್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಸಮಾರೋಪ ಸಮಾರಂಭ ಹಾಗೂ ರೈತರ ಸಮಾವೇಶದಲ್ಲಿ ಮಾತನಾಡಿದರು.
ಸಾಲಕ್ಕೆ ಅಂಜಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳ ಬಾರದು. ಬರಗಾಲದಲ್ಲಿ ಸಾಲ ವಸೂಲಿ ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ಆನ್‌ಲೈನ್ ಮೂಲಕ ರೈತರ ಆಸ್ತಿ ಹರಾಜು ಹಾಕಲಾಗುತ್ತಿದೆ. ಭೂಸ್ವಾಧೀನ ಕಾನೂನಿಗೆ ತಿದ್ದುಪಡಿ ತಂದು ರೈತನೇ ಭೂಮಿಯ ಮೂಲ ಮಾಲೀಕ ಎಂಬ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸದಿರು.