ಮೂರು ದಿನಕ್ಕೊಮ್ಮೆ ನೀರು ಹರಿಸುವ ನಿರ್ಧಾರ ಕೈಬಿಡಿ

07-11-Shiva-1
ನಗರಕ್ಕೆ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಹರಿಸುವ ತೀರ್ಮಾನ ಕೈಗೊಂಡಿರುವ ನಗರಸಭೆ ಪೌರಾಯುಕ್ತರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಬಿಜೆಪಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ಮಾಜಿ ಶಾಸಕ ಎ.ಪಾಪಾರೆಡ್ಡಿ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ನಗರಸಭೆ ಸದಸ್ಯರಾದ ಶರಣಬಸವ ಬಲ್ಲಟಗಿ, ಈ.ಶಶಿರಾಜ, ವಿ.ನಾಗರಾಜ, ನಗರ ಘಟಕದ ಅಧ್ಯಕ್ಷ ಬಿ.ಗೋವಿಂದ, ನಗರಸಭೆ ಸದಸ್ಯರಾದ ಮುಖಂಡರಾದ ಆಂಜಿನೇಯ ಕಡಗೋಲ, ಪಿ.ಶ್ರೀನಿವಾಸರೆಡ್ಡಿ, ಮಹೇಂದ್ರರೆಡ್ಡಿ, ತಿಮ್ಮಪ್ಪ ಫಿರಂಗಿ, ಯು.ನರಸರೆಡ್ಡಿ, ರಾಜಕುಮಾರ, ಎ.ಚಂದ್ರಶೇಖರ ಇದ್ದರು.
Published on

ರಾಯಚೂರು: ನಗರಕ್ಕೆ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವುದಾಗಿ ಆದೇಶ ಹೊರಡಿಸಿರುವ ನಗರಸಭೆ ಪೌರಾಯುಕ್ತ ಗುರುಸಿದ್ಧಯ್ಯ ಹಿರೇಮಠ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಬಿಜೆಪಿ ನಗರ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಚಂದ್ರಶೇಖರ ನಾಯಕಗೆ ಮನವಿ ಸಲ್ಲಿಸಿ, ಕುಡಿಯುವ ನೀರು ಸರಬರಾಜು ವಿಚಾರದಲ್ಲಿ ಪೌರಾಯುಕ್ತರು ಚುನಾಯಿತ ಸದಸ್ಯರ ಅಭಿಪ್ರಾಯ ಪಡೆಯದೆ ಅಕಾರ ದುರುಪಯೋಗ ಪಡಿಸಿಕೊಂಡು ನಿರ್ಧಾರ ಕೈಗೊಂಡಿದ್ದಾರೆ ಎಂದು ದೂರಿದರು.
ನಗರದ 24 ವಾರ್ಡ್‌ಗಳಿಗೆ ಕೃಷ್ಣಾ ನದಿಯಿದಮ ಹಾಗೂ 24 ವಾರ್ಡ್‌ಗಳಿಗೆ ರಾಂಪುರ ಜಲಾಶಯದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಬಸವಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹಿವಿದ್ದು, ಕೃಷ್ಣಾ ನದಿಯಲ್ಲಿ ನೀರಿನ ಹರಿವು ಇದೆ. ಮತ್ತೊಂದೆಡೆ ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ರಾಂಪುರ ಜಲಾಶಯಕ್ಕೆ ನೀರು ತುಂಬಿಸಲು ಅವಕಾಶವಿದೆ.
ಆದರೆ ಪೌರಾಯುಕ್ತರು ನೀರಿನ ಕೊರತೆ ನೆಪವೊಡ್ಡಿ ಮೂರು ದಿನಕ್ಕೊಮ್ಮೆ ನೀರು ಹರಿಸುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ನಗರಸಭೆ ಸದಸ್ಯರು, ಶಾಸಕರು, ಸಂಸದರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಅದ್ಯಾವುದನ್ನು ಮಾಡದೆ ಆದೇಶ ಹೊರಡಿಸಿರುವುದ ಅನುಮಾನಕ್ಕೆ ಕಾರಣವಾಗಿದೆ.
ಕಚೇರಿಯಲ್ಲಿ ಹೆಚ್ಚಿನ ಕಡತಗಳ ವಿಲೇವಾರಿ ಬಾಕಿಯಿದೆ. ಮುಟೇಷನ್, ಇ ಖಾತಾ, ಕಟ್ಟಡ ಪರವಾನಗಿಯನ್ನು ಸಮಯಕ್ಕೆ ಸರಿಯಾಗಿ ನೀಡದ ಕಾರಣ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅದನ್ನು ಮಾಡದೆ ತಮ್ಮ ವ್ಯಾಪ್ತಿಗೆ ಬಾರದ ನೀರು ಹರಿಸುವ ನಿರ್ಧಾರದ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಿದ್ದು, ಕೂಡಲೇ ಅವರ ವಿರುದ್ಧ ಕ್ರಮಕೈಗೊಂಡು ಆದೇಶವನ್ನು ರದ್ದುಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎ.ಪಾಪಾರೆಡ್ಡಿ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ನಗರಸಭೆ ಸದಸ್ಯರಾದ ಶರಣಬಸವ ಬಲ್ಲಟಗಿ, ಈ.ಶಶಿರಾಜ, ವಿ.ನಾಗರಾಜ, ನಗರ ಘಟಕದ ಅಧ್ಯಕ್ಷ ಬಿ.ಗೋವಿಂದ, ನಗರಸಭೆ ಸದಸ್ಯರಾದ ಮುಖಂಡರಾದ ಆಂಜಿನೇಯ ಕಡಗೋಲ, ಪಿ.ಶ್ರೀನಿವಾಸರೆಡ್ಡಿ, ಮಹೇಂದ್ರರೆಡ್ಡಿ, ತಿಮ್ಮಪ್ಪ ಫಿರಂಗಿ, ಯು.ನರಸರೆಡ್ಡಿ, ರಾಜಕುಮಾರ, ಎ.ಚಂದ್ರಶೇಖರ, ಗಿರೀಶ ಕನಕವೀಡು, ವಿಜಯರಾಜೇಶ್ವರಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net