ಸಂಶೋಧನಾರ್ಥಿಗಳ ಹಣ ಕಡಿತ ನಿರ್ಧಾರ ಕೈಬಿಡಿ

26-10-Shiva-2
ಅಲ್ಪ ಸಂಖ್ಯಾತ ಸಮುದಾಯದ ಪಿಎಚ್‌ಡಿ, ಎಂಫಿಲ್ ಸಂಶೋಧನಾರ್ಥಿಗಳಿಗೆ ನೀಡಲಾಗುತ್ತಿದ್ದ ೆಲೋಶಿಪ್ ಅನುದಾನ ಕಡಿತಗೊಳಿಸದಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯಿಂದ ಗುರುವಾರ ಮನವಿ ಸಲ್ಲಿಸಲಾಯಿತು. ಸಂಘಟನೆ ರಾಜ್ಯ ಸಮಿತಿ ಸದಸ್ಯ ಅಜೀಜ್ ಜಾಗೀರದಾರ್, ಜಿಲ್ಲಾ ಸಮಿತಿ ಸದಸ್ಯ ನಿರಂಜನಕುಮಾರ, ಪದಾಕಾರಿಗಳಾದ ಜಿ.ಅಮರೇಶ, ವೆಂಕಟೇಶ, ವಿನಯಕುಮಾರ, ಲಕ್ಷ್ಮಣ ಇದ್ದರು.
Published on

ರಾಯಚೂರು: ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಪಿಎಚ್‌ಡಿ, ಎಂಫಿಲ್ ವ್ಯಾಸಂಗ ಮಾಡುವ ಸಂಶೋಧನಾರ್ಥಿಗಳಿಗೆ ನೀಡಲಾಗುತ್ತಿದ್ದ ೆಲೋಶಿಪ್ ಹಣ ಕಡಿತಗೊಳಿಸಿರುವ ತೀರ್ಮಾನವನ್ನು ಕೈಬಿಡಬೇಕು ಎಂದು ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ ಒತ್ತಾಯಿಸಿದೆ.
ಸಂಘಟನೆ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಗುರುವಾರ ಮನವಿ ಸಲ್ಲಿಸಿ, ಸರ್ಕಾರದ ನಿರ್ಧಾರದಿಂದ ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದರು.
2019 ಮತ್ತು 2020ರಲ್ಲಿ ಪಿಎಚ್‌ಡಿ ಸಂಶೋಧನಾರ್ಥಿಗಳಿಗೆ ಮೂರು ವರ್ಷ ಹಾಗೂ ಎಂಫಿಲ್ ವಿದ್ಯಾರ್ಥಿಗಳಿಗೆ ಎರಡು ವರ್ಷಕ್ಕೆ ಪ್ರತಿ ತಿಂಗಳು 25 ಸಾವಿರ ರೂ.ಗಳನ್ನು ಜೆಆರ್‌ಎ್ ಮಾದರಿಯಲ್ಲಿ ನೀಡಲಾಗುತ್ತಿತ್ತು. ಜತೆಗೆ 10 ಸಾವಿರ ರೂ.ಗಳನ್ನು ನಿರ್ವಹಣಾ ವೆಚ್ಚವಾಗಿ ಭರಿಸಲಾಗುತ್ತಿತ್ತು.
ಆದರೆ 2022-23ನೇ ಸಾಲಿನಿಂದ ಜಾರಿಗೆ ಬರುವಂತೆ ವಿವಿಧ ವಿವಿಗಳಲಿ ಪೂರ್ಣಕಾಲಿಕ ಪಿಎಚ್‌ಡಿ ವಿದ್ಯಾರ್ಥಿಗಳಿಗೆ 3 ವರ್ಷಗಳ ಅವಗೆ ಹಾಗೂ ಎಂಫಿಲ್ ವಿದ್ಯಾರ್ಥಿಗಳಿಗೆ ಎರಡು ವರ್ಷದ ಅವಗೆ ಒಂದು ಕೋರ್ಸ್‌ಗೆ ಒಂದು ಬಾರಿ ಮಾತ್ರ 10 ಸಾವಿರ ರೂ.ಗಳನ್ನು ನೀಡಲು ಆದೇಶ ಹೊರಡಿಸಲಾಗಿದೆ.
ಸಂಶೋಧನಾ ವಿದ್ಯಾರ್ಥಿಗಳಿಗೆ ಹಿಂದೆ ನೀಡಲಾಗುತ್ತಿದ್ದ 25 ಸಾವಿರ ರೂ. ಸಾಕಾಗುತ್ತಿರಲಿಲ್ಲ. ಈಗ ಕೇವಲ 10 ಸಾವಿರ ರೂ. ನೀಡುವುದರಿಂದ ವಿದ್ಯಾರ್ಥಿಗಳು ತಮ್ಮ ಸಂಶೋಧನೆ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಹಿಂದಿನಂತೆ ಹಣ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘಟನೆ ರಾಜ್ಯ ಸಮಿತಿ ಸದಸ್ಯ ಅಜೀಜ್ ಜಾಗೀರದಾರ್, ಜಿಲ್ಲಾ ಸಮಿತಿ ಸದಸ್ಯ ನಿರಂಜನಕುಮಾರ, ಪದಾಕಾರಿಗಳಾದ ಜಿ.ಅಮರೇಶ, ವೆಂಕಟೇಶ, ವಿನಯಕುಮಾರ, ಲಕ್ಷ್ಮಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net